ಒಲವೇ ವಿಸ್ಮಯ

Author : ಗಾಯತ್ರಿ ರಾಜ್

Pages 152

₹ 195.00




Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

‘ಒಲವೇ ವಿಸ್ಮಯ’ ಗಾಯತ್ರಿ ರಾಜ್ ಅವರ ಕೃತಿಯಾಗಿದೆ. ಅನುಭೂತಿ ಮತ್ತು ಸಾಹಿತ್ಯಗಳನ್ನು ಸಂಕರಗೊಳಿಸಬಹುದಾದ ಸಾಧ್ಯತೆಯನ್ನೇ ಲಹರಿಯಾಗಿಸುವ ಮೂಲಕ ಭಾವಾನುಸಂಧಾನಗೊಳಿಸುವ ಲೇಖಕಿ, ಇವೆಲ್ಲ ಓದುಗ ತನ್ನದೇ ಬದುಕಿನ ಅನುಭವ ಎನ್ನಿಸುವಂತೆ ಚಿತ್ರಿಸಿದ್ದಾರೆ. ಅಷ್ಟೇ ವಾಸ್ತವ ಈ ಲಹರಿಗಳು. ಸಂಕೀರ್ಣ ಸಮಯಗಳ ಅನುಭವಕ್ಕೆ ಹೋಲಿಕೆಗೊಳಪಡಿಸುವಂತೆ ಪ್ರಸ್ತುತಪಡಿಸುವುದು ಮತ್ತು ಹಾಗೆ ನಂಬಿಸುವಂತೆ ಬರೆಯುವುದು ಗಾಯತ್ರಿಯ ವಿಶೇಷತೆ ಪೂರ್ವಾಪರ ಇಲ್ಲದ, ಉತ್ತರೋತ್ತರ ಚಿಂತನೆಗೆ ಎಳೆಸದ, ಆದರೆ ವಾಸ್ತವದಲ್ಲಿ ಇದೆಲ್ಲ ನನ್ನದಾಗಬಾರದಿತ್ತಾ ಎನ್ನಿಸುವಂತಹ ಪ್ರೇಮ ಕತೆಗಳು ಇಲ್ಲಿವೆ. ಬಗೆದಷ್ಟೂ ಹೊಸ ಹೊಸ ಆಯಾಮಗಳ ಮೂರ್ತರೂಪ ಕಟ್ಟಿಕೊಡುವಲ್ಲಿ ಶ್ರಮಿಸಿರುವ ಲೇಖಕಿ, ಅಲ್ಲಲ್ಲಿ ನಿರೂಪಣೆ ಬದಲಾಗಿ ಸ್ವತಃ ರಂಗಕ್ಕಿಳಿದಂತೆ ಅಕ್ಷರ ಕೆತ್ತಿದ್ದು ವಿಶೇಷತೆ.

About the Author

ಗಾಯತ್ರಿ ರಾಜ್

ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ. ...

READ MORE

Related Books