ಈ ಪ್ರೀತಿ ಒಂಥರಾ...

Author : ಭಾರತಿ ಬಿ ವಿ

Pages 172

₹ 300.00




Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

ಭಾರತಿ ಬಿ ವಿ ಅವರು ತಮ್ಮ ಕವಿತೆ, ಕಥೆ, ಪ್ರಬಂಧ, ಅನುವಾದ, ಅನುಭವ ಕಥನ ಹಾಗೂ ಪ್ರವಾಸ ಕಥನಗಳಿಂದ ಹೆಸರಾಗಿರುವವರು. ಅವರ ಈ ಹೊಸ `ಈ ಪ್ರೀತಿ ಒಂಥರಾ…’ ಕೃತಿಯಲ್ಲೂ ಕೂಡ ನಿತ್ಯ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು; ಆಕ್ಷೇಪಣೆಗಳನ್ನು; ಹರೆಯ ಮತ್ತು ಕಾಲವನ್ನು ಕುರಿತ ವ್ಯಾಕುಲತೆಗಳನ್ನು 'ಪ್ರೇಮ'ವೆಂಬ 'ದಿವ್ಯ ಮೂಲಿಕೆ'ಯಿಂದ ಗೆಲ್ಲಬಹುದೆಂಬ 'ಶುಭ ಪ್ರತೀಕ್ಷೆಗಳನ್ನು; ಮನುಷ್ಯರನ್ನು ಪರಸ್ಪರ ಬೆಸೆಯುವುದು 'ಪ್ರೀತಿ' ಎಂಬ ಭಾವನೆಯಾಗಿರಬೇಕೆಂಬ ಒತ್ತಡಗಳನ್ನು ಹಂಚಿಕೊಳ್ಳುವ ಕಾವ್ಯದಂಥ ಬರಹಗಳಿವೆ. ಇವು ಓದುಗರ ಮನೋಭಾವವಾಗಿ ನಿಶ್ಚಲ ಮನಸ್ಸುಗಳನ್ನು ಅಲುಗಾಡಿಸಿ ಎಚ್ಚರಿಸುತ್ತವೆ.

About the Author

ಭಾರತಿ ಬಿ ವಿ

ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.  ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ...

READ MORE

Related Books