
ʻನದಿ ದಾಟಿ ಬಂದವರುʼ ಶಶಿಧರ ಹಾಲಾಡಿಯವರ ಕಾದಂಬರಿಯಾಗಿದೆ. ಕೃತಿ ಕುರಿತಂತೆ ಬಿ. ಜನಾರ್ದನ ಭಟ್ ಅವರು ಹೀಗೆ ಹೇಳಿದ್ದಾರೆ; ಈ ಕಾದಂಬರಿಯು ಸ್ವಾತಂತ್ಯ್ರಪೂರ್ವದ ಆರ್ಥಿಕ ಕಾರ್ಪಣ್ಯ ಮತ್ತು ಸ್ವಾತಂತ್ಯ್ರ ಹರಣದ ಪರಿಪ್ರೇಕ್ಯ್ಷೆಯಲ್ಲಿ ಪ್ರಾರಂಭವಾಗಿ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಂಬಂಧಗಳು ಪಡೆದ ಹೊಸ ವಿನ್ಯಾಸಗಳನ್ನು, ಹೊಸ ಅವಕಾಶಗಳನ್ನು ಅದ್ಭುತವಾಗಿ ತೋರಿಸುತ್ತದೆ. ಕಡುಕಾರ್ಪಣ್ಯದಲ್ಲಿದ್ದ ಕುಯಿರ ನಾಯಕ ಎಂಬ ಗೇಣಿದಾರ ಬಡತನದಿಂದ ಜರ್ಝರಿತನಾಗಿ ಕುಟುಂಬ ಸಹಿತ ರಾತೋರಾತ್ರಿ ಧಣಿಗಳ ಹಿಡಿತದಿಂದ ಪಾರಾಗಿ ನದಿ ದಾಟಿ ಬೇರೊಂದು ಗ್ರಾಮದಲ್ಲಿ ವೆಂಕಣ್ಣಯ್ಯನ ಚಾಲಗೇಣಿದಾರನಾಗಿ ನೆಲೆಯಾಗುತ್ತಾನೆ. ತಲೆಮಾರು ಕಳೆದಾಗ ದೇಶ ಬದಲಾಗಿ, ವ್ಯವಸ್ಥೆ ಬದಲಾಗಿ, ಸಂಬಂಧಗಳು ಬದಲಾಗಿ ಹೊಸವಿನ್ಯಾಸಗಳು ಮೂಡುತ್ತವೆ. ಭೂಮಸೂದೆಯಲ್ಲಿ ವೆಂಕಣ್ಣಯ್ಯನ ಕುಟುಂಬ ಭೂಮಿಯಿಂದ ಹೊರಬಿದ್ದು ನಗರದಲ್ಲಿ ಬದುಕು ಕಟ್ಟಿಕೊಂಡರೆ ಕುಯಿರ ನಾಯಕನ ಪೀಳಿಗೆ ಭೂಮಿ ಹಕ್ಕನ್ನು ಪಡೆದು ದೇಶದ ಗಣ್ಯ ಪ್ರಜೆಗಳಾಗುತ್ತಾರೆ. ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಯೊಬ್ಬ ಸಿದ್ಧ ನಾಯಕನ ಮನೆಗೆ ಬಂದು ಖಾತೆ ತೆರೆಯಿಸಿ ಮನೆ ಕಟ್ಟಲು ಸಾಲ ಕೊಡಲು ಮುಂದಾಗುವುದು ಈ ಸಕಾರಾತ್ಮಕ ಪರಿವರ್ತನೆಯ ಸಾಂಕೇತಿಕ ಕಥನವಾಗಿದೆ. ಭಾಷೆಯ ಮೂಲಕ ಈ ಜಗತ್ತು ನಮ್ಮೆದುರು ಅದ್ಭುತವಾಗಿ ಅನಾವರಣವಾಗುವುದು ಶಶಿಧರ ಹಾಲಾಡಿಯವರ ಕತೆಗಾರಿಕೆಯ ಶಕ್ತಿಗೆ ದ್ಯೋತಕವಾಗಿದೆ ಎಂದಿದ್ದಾರೆ.

ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ) ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು. ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ...
READ MORE