ತಿಪ್ಪಜ್ಜಿ ಸರ್ಕಲ್

Author : ಬಿ.ಎಲ್.ವೇಣು

Pages 148

₹ 150.00




Year of Publication: 2013
Published by: ಗೀತಾಂಜಲಿ ಪಬ್ಲಿಕೇಶನ್ಸ್

Synopsys

ಲೇಖಕ ಬಿ.ಎಲ್.ವೇಣು ಅವರ ಕೃತಿ ತಿಪ್ಪಜ್ಜಿ ಸರ್ಕಲ್. ದೇವದಾಸಿನ ಬದುಕಿನ ಸುತ್ತ ಹೆಣೆದಿರುವ ಈ ಕತೆಯನ್ನು ನಿರ್ದೇಶಕ ಆದಿತ್ಯ ಚಿಕ್ಕಣ್ಣ ಅವರು ಸಿನಿಮಾ ಮಾಡಿದ್ದಾರೆ. ಪ್ರಕಾಶಕರು ಈ ಕೃತಿಯ ಬಗ್ಗೆ ಹೇಳಿರುವಂತೆ, ವೇಣು ಅವರದು ವೇಗವಾಗಿ ಓದಿಸಿಕೊಂಡು ಹೋಗುವಂತಹ ಬರಹ, ಮೋಡಿ ಹಾಕುವ ಶೈಲಿ ಪ್ರಸ್ತುತ ಪರಿಸ್ಥಿತಿಗಳನ್ನೇ ಕತೆಯನ್ನಾಗಿಸುವ ಪರಿ ವಿಡಂಬನೆಯ ಮೂಲಕ ಪಟ್ಟಭದ್ರ ಹಿತಾಸಕ್ತಿಗಳನ್ನು ಚುಚ್ಚುವ ವೈಖರಿ ಮೆಚ್ಚುಗೆ ಪಡೆದಿದೆ ಎಂದಿದ್ದಾರೆ.

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Related Books