ಆಸೆಯ ಕಂದೀಲು

Author : ಮಂಜುಳ ಡಿ

Pages 64

₹ 55.00
Year of Publication: 2020
Published by: ತೇಜು ಪಬ್ಲಿಕೇಷನ್ಸ್
Address: ನಂ 1014 , 24 ನೇ ಮುಖ್ಯರಸ್ತೆ, 16 ನೇ ಕ್ರಾಸ್ಬಿ ಎಸ್ ಕೆ 2 ನೇ ಹಂತ , ಬೆಂಗಳೂರು- 560070
Phone: 9448050463

Synopsys

ಆಸೆಯ ಕಂದೀಲು- ಮಂಜುಳಾ ಅವರ ಕವನ ಸಂಕಲನ. ಕವಿತೆಗಳ ಮೂಲ ಗ್ರಹಿಕೆ ಮತ್ತು ಉದ್ದೇಶದ ಮಾರ್ಗಗಳನ್ನು ಕವಿ ಸ್ಪಷ್ಟಪಡಿಸುತ್ತಾರೆ. ಇರುವ ಹೊಸ ಭಾಷೆ ಹಾಗೂ ನುಡಿಗಟ್ಟುಗಳ ಮೂಲಕ ಒಂದಿಷ್ಟು ಹಳತನ್ನು ಬದಿಗೆ ಸರಿಸುವ ಆಸಕ್ತಿ ಹಾಗೂ ಗಾಢವಾದ ವಿಷಾದವನ್ನೂ ಕೂಡಾ ಲವಲವಿಕೆಯ ಮೂಲಕ ಕಲಾತ್ಮಕ ಗೊಳಿಸುವ ಅಭಿವ್ಯಕ್ತಿ ಹಂಬಲ. ಈ ಎರಡೂ ಅಂಶಗಳು ಕಾವ್ಯಗಳಲ್ಲಿ ಗೋಚರಿಸುತ್ತವೆ.  ‘ಜಗತ್ತಿನ ನೋವೇ ಒಂದಾದರೆ, .ನಿನ್ನ ನೋವೇ ಒಂದು’ ಎಂಬ ನಿಲುವೇ ಅವರ ಕವನಗಳ ಹೊಸ ಹೇಳುವಿಕೆಗೆ ಕಾರಣವಾಗುತ್ತದೆ. ಇಲ್ಲಿರುವ ಹೆಚ್ಚಿನ ಕವನಗಳಲ್ಲಿ ಯಾರಿಂದಲೋ ಘಾಸಿಗೊಂಡ ಮೃದು ಮನಸೊಂದು ನಿರಂತರ ಕಾಯುವಿಕೆಯಲ್ಲಿ ಗಟ್ಟಿಯಾಗುವ ಆಳದ ದನಿಯಂತೆ ಕಂಡು ಬರುತ್ತವೆ ಮಾತ್ರವಲ್ಲ ಕಾವ್ಯ ವಲಯದಲ್ಲಿ ಹೊಸ ಭರವಸೆ ನೀಡುತ್ತವೆ. .

About the Author

ಮಂಜುಳ ಡಿ

ಲೇಖಕಿ ಮಂಜುಳ ಡಿ. ಅವರು ಉದಯವಾಣಿ ಪತ್ರಿಕೆಯ ಅಂಕಣಕಾರರು. ಈ ಅಂಕಣಗಳ ಬರಹಗಳನ್ನು ಸಂಗ್ರಹಿಸಿ ಅವರು ನಿನಾದವೊಂದು ಎಂಬ ಕೃತಿ ರಚಿಸಿದ್ದಾರೆ.  ...

READ MORE

Related Books