ಶಿಶುನಾಳ ಶರಿಫ ಶಿವಯೋಗಿ

Author : ಚಂದ್ರಗೌಡ ಕುಲಕರ್ಣಿ

Pages 120

₹ 100.00
Year of Publication: 2019
Published by: ಶಕ್ತಿ ಪ್ರಿಂಟರ್‍ಸ್‌ ಮತ್ತು ಪಬ್ಲಿಷರ್‍ಸ್‌
Address: ವಿಧಾನಸೌಧ ಎಕ್ಸ್‌ಟೆನ್ಷನ್‌, ಲಗ್ಗೆರೆ, ಬೆಂಗಳೂರು

Synopsys

ಶಿಶುನಾಳ ಶರಿಫ ಶಿವಯೋಗಿ ಅವರ ಕುರಿತ ಸಂಪೂರ್ಣ ಮಾಹಿತಿ ನೀಡಬಲ್ಲ ಕೃತಿ ಇದಾಗಿದೆ. ಈ ಕೃತಿಯಲ್ಲಿ ಶಿಶುನಾಳ ಶರಿಫರ ಹುಟ್ಟು, ಬಾಲ್ಯ, ಸಾಮಾಜಿಕ ಜೀವನದ ಕುರಿತು ವಿವರಿಸಲಾಗಿದೆ. ಲೇಖಕರು ಓದುಗನ ಮನ ಮುಟ್ಟುವಂತೆ ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ತ್ರಿಪದಿ ಕಾವ್ಯದಲ್ಲಿ ಈ ಕೃತಿಯು ಮೂಡಿಬಂದಿದೆ. ಶಿಶುನಾಳ ಶರಿಫ ಶಿವಯೋಗಿ ತ್ರಿಪದಿ ಕಾವ್ಯ ನಿಮ್ಮ ಓದಿಗಾಗಿ:

ದೋತರ ಬಿಳಿಯಂಗಿ ಜೋತಾಡೊ ಶೆಲ್ಲೆವು   

ಜಾತ ಚಪ್ಪಲಿ ಜೋಡನ್ನು| ಧರಿಸಿದ             

ತಾತ ಶರಿಫನ ಬಗೆನೋಡು|

 

ಸುತ್ತಲು ಹಬ್ಬಿದ ಕತ್ತಲ ಭೇದಿಸಿ   

ಸತ್ಯದ ಅರಿವು ತೋರಿದ| ಗುರುವಿಗೆ

ಮೊತ್ತ ಮೊದಲಿಗೆ ವಂದಿಸುವೆ|

About the Author

ಚಂದ್ರಗೌಡ ಕುಲಕರ್ಣಿ

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.   ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ...

READ MORE

Related Books