ಪದಗಳ ಕದ

Author : ಗೀತಯೋಗಿ (ಸೋಮನಾಥ ಎಂ. ದೊಡ್ಡಿ)

Pages 95

₹ 70.00
Year of Publication: 2015
Published by: ವಾತ್ಸಲ್ಯ ಪ್ರಕಾಶನ
Address: ಅಂಚೆ: ಬನಹಟ್ಟಿ, ತಾ: ಜಮಖಂಡಿ, ಜಿ: ವಿಜಾಪುರ,
Phone: 9448242980

Synopsys

ಒಟ್ಟು 65 ಕವನಗಳಿರುವ 'ಪದಗಳ ಕದ’; ಗೀತಯೋಗಿ (ಸೋಮನಾಥ ಎಂ.ದೊಡ್ಡಿ) ಅವರ ಮೊದಲ ಸಂಕಲನ. ಬಹುತೇಕ ಕವನಗಳಲ್ಲಿ ವಿಷಯ ವೈವಿಧ್ಯತೆ ಇದೆ. ಸಾಹಿತಿ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ ಕೃತಿಯ ಮುನ್ನುಡಿಯಲ್ಲಿ ’ ಇಲ್ಲಿಯ ಕವಿತೆಗಳು ಮಾರ್ಗ ಹಾಗೂ ದೇಸಿ ಸಾಹಿತ್ಯ ಪ್ರಕಾರಕ್ಕೆ ಸಂಬಂಧಿಸಿವೆ. ಕೆಲ ಕವನಗಳು ಅಧ್ಯಾತ್ಮವನ್ನು ಜೀವಾಳವಾಗಿಸಿಕೊಂಡಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಗೀತಯೋಗಿ (ಸೋಮನಾಥ ಎಂ. ದೊಡ್ಡಿ)
(01 June 1976)

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಗೀತಯೋಗಿ (ಸೋಮನಾಥ ಎಂ. ದೊಡ್ಡಿ) ಶಿಕ್ಷಣದಲ್ಲಿ ಎಂ.ಫಿಲ್ ಪದವೀಧರರು. ತಂದೆ ಮಲ್ಲಿಕಾರ್ಜುನ, ತಾಯಿ: ರುಕ್ಮಿಣಿ. ಮೈಸೂರಿನ ಮಾನಸಗಂಗೋತ್ರಿಯಿಂದ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಇಂಡಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಐತಿಹಾಸಿಕ ತಾಣಗಳ ವೀಕ್ಷಣೆ ಹಾಗೂ ಅಧ್ಯಯನ ಇವರ ಹವ್ಯಾಸ. ಈಗಾಗಲೇ ’ಪದಗಳ ಕದ ಹಾಗೂ ’ಗಂಧದೌತಣ’ ಈ ಎರಡೂ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ...

READ MORE

Conversation

Related Books