ಹಸಬಿ

Author : ವಿನಯಾ ಒಕ್ಕುಂದ

Pages 108

₹ 90.00




Year of Publication: 2014
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಮಹಿಳಾಕಾವ್ಯ ಪ್ರಜ್ಞಾಪೂರ್ವಕವಾಗಿ ಹಿಂದೆ ಸರಿಸಿದ ಅಸ್ಮಿತೆಯನ್ನು ನೇರವಾಗಿ ಸ್ಥಾಪಿಸಿಕೊಳ್ಳುವ ದಿಟ್ಟ ಪ್ರಯತ್ನವಾಗಿದೆ ಎಂದು ಹೇಳುವುದಾದರೆ ಕವಯತ್ರಿ ಡಾ. ವಿನಯಾ ಅವರ ಕಾವ್ಯ ರಚನೆಯನ್ನು ಗಮನಿಸಬಹುದು. 

ಸ್ತ್ರೀ ಕಾವ್ಯದ ನಡೆಯನ್ನು ಅದರ ಬಾಗುಬಳಕುಗಳನ್ನು, ಅದು ಆಗಾಗ ಮುಗ್ಗರಿಸಿ ಬೀಳುವುದನ್ನು- ಏಳುವುದನ್ನು ಎಚ್ಚರಿಕೆಯಿಂದ ಗಮನಿಸುವ ಪರಿ ವಿನಯಾ ಅವರ ಕವಿತೆಗಳಲ್ಲಿ ಸ್ಪಷ್ಟವಾಗುತ್ತದೆ.  ಹೀಗಾಗಿ ಅವರಿಗೆ ಕಾವ್ಯವೆಂದರೆ ಒಡಲಕಿಚ್ಚಿನಲಿ ಬಿರಿದ ಹೂಗಂಧ. ತಳಮೂಲದೊಳಗೆಲ್ಲೋ ತಂಬೂರಿ ನಾದ, ಪ್ರತಿಭಟನೆಯ ಪಾಠಗಳು, ಜೀವ ಜುಮರಿನ ಹಾಡು , ಅದೊಂದು ಅಗ್ನಿಪಥ, ಮಾಯಾದೀವಿಗೆ, ಅರುಣಾ ಶಾನಭಾಗ, ಇರೋಮ್ ಶರ್ಮಿಳಾರವರ ಹೋರಾಟಗಳು, ದಾಖಲಾಗಬೇಕಾದ ಚರಿತ್ರೆ. ಅಂತಿಮವಾಗಿ ಕಾವ್ಯವೆಂದರೆ ದಾಸಿಯಾಗಿ ದೇವಿಯಾಗಿ ರಕ್ತಮಾಂಸದೊಂದಿಗೆ ನಿರಾಳವಾಗಿ ಬದುಕಲಿಚ್ಛಿಸುವ ಹೆಣ್ಣೊಬ್ಬಳ  ಏಕತಾರಿಯ ಏರಿದ ದನಿ. ಇವೆಲ್ಲವನ್ನೂ ಒಳಗೊಂಡಿರುವ ಹಸಬಿ ಕೃತಿ  ಪ್ರತಿಯೊಬ್ಬರೂ ಓದಬಹುದಾದ ಸೂಕ್ಷ್ಮ ಸಂವೇದನೆಯ ಕವಿತೆಗಳ ಗಂಟು ಎನ್ನಬಹುದು.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Related Books