ಕಾಡುವ ಕವಿತೆಗಳು

Author : ಎ.ಎನ್.ರಮೇಶ್. ಗುಬ್ಬಿ

Pages 174

₹ 140.00




Year of Publication: 2018
Published by: ಗೋಮಿನಿ ಪ್ರಕಾಶನ
Address: ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 9986692342

Synopsys

ಕವಿತೆ ಎಂದರೆ ಅದು ಕೇವಲ ಭಾವನೆಯಲ್ಲ. ಅದರೊಳಗೆ ಸಾಂತ್ವನ, ಹೃದಯವನ್ನು ಅರಳಿಸುವಿಕೆಯ ಕೆಲಸವನ್ನು ಮಾಡಬಲ್ಲುವು ಎಂಬುದನ್ನು ಈ ಕವಿತೆಗಳು ಸಾರುತ್ತವೆ. ‘ಕಾಡುವ ಕವಿತೆಗಳು’ ಒಂದು ಪಾಸಿಟೀವ್ ಶಕ್ತಿ ತುಂಬುವ ಗೆಳೆಯನಾಗಿ ಮಕ್ಕಳಿಗೆ ಸ್ಫೂರ್ತಿ ತುಂಬುವ, ಸೋತಾಗ ಹೆಜ್ಜೆ ಇಡುವ ಟಾನಿಕ್ಕಾಗಬಲ್ಲದು. ಕೃತಿಗೆ ಮುನ್ನುಡಿ ಬರೆದಿರುವ ಶ್ರೀದೇವಿ ಕೆರೆಮನೆ ಅವರು “ಬೆಳೆಯುತ್ತಿರುವ ನಮ್ಮ ಹದಿಹರೆಯದ ಮಕಳ ಕೈಗೆ ಈ ಪುಸ್ತಕವನ್ನಿತ್ತರೆ ಮಕ್ಕಳ ಮನೋಭಾವದಲ್ಲಿ ನಿರೀಕ್ಷಿತ ಬದಲಾವಣೆ ತರಬಹುದೇನೋ ಎಂಬ ಆಶಾವಾದ ನನ್ನದು. ಹೊಸಹೊಳಹುಗಳ ಈ ಕವಿತೆಗಳು ಕಾಡುತ್ತಲೇ ಇರಲಿ ನಡಿಗೆಯೊಂದೇ ನಿರಂತರ ಉಳಿದುದೆಲ್ಲ ಅಗೋಚರ ಎಂಬ ರಮೇಶ್ ಗುಬ್ಬಿಯವರ ಕಾವ್ಯದ ನಡಿಗೆ ಗೋಚರಿಸುತ್ತಲೇ ನಿರಂತರವಾಗಲಿ” ಎಂದು ಕವಿತೆಗಳ ಕುರಿತು ಶ್ಲಾಘಿಸಿದ್ದಾರೆ.

About the Author

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...

READ MORE

Related Books