ಅವಳೆದೆಯ ಡೈರಿಯೊಳಗೆ

Author : ಬಸಯ್ಯ ಸ್ವಾಮಿ ಕಮಲದಿನ್ನಿ

Pages 72

₹ 60.00




Year of Publication: 2019
Published by: ಬಂಡಾರು ಪ್ರಕಾಶನ
Address: ಮಸ್ಕಿ, ರಾಯಚೂರು ಜಿಲ್ಲೆ- 584124
Phone: 9886407011

Synopsys

ಬಸಯ್ಯ ಸ್ವಾಮಿ ಕಮಲದಿನ್ನಿಯವರ ಮೊದಲ ಕವನ ಸಂಕಲನ‘ಅವಳೆದೆಯ ಡೈರಿಯೊಳಗೆ’- ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ ಸಹಾಯಧನಪಡೆದ ಕೃತಿ. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಬಸಯ್ಯ ಸ್ವಾಮಿ ಕಮಲದಿನ್ನಿ ರಾಯಚೂರಿನ ಮತ್ತೊಂದು ಜವಾರಿ ಪ್ರತಿಭೆ ಎನ್ನುತ್ತಾರೆ ಕವಿ ಚಿದಾನಂದ ಸಾಲಿ. ‘ಬಡತನ ಮತ್ತು ದಟ್ಟ ಗ್ರಾಮೀಣ ಜೀವನಗಳೇ ಯಾವುದೇ ಲೇಖನಿಗೆ ದಕ್ಕಬಹುದಾದ ಸರ್ವೇಸಾಮಾನ್ಯ ಅನುಭವದ ದ್ರವ್ಯಗಳು, ಅದೇ ಕಾರಣಕ್ಕೆ ಇರಬಹುದು-ವಯೋಸಹಜವಾಗಿ ಪ್ರೇಮವು ಬರೆಹದ ಕೇಂದ್ರವಾಗುವ ಬದಲಿಗೆ ಇಲ್ಲಿ ಲೋಕಾಂತವು ಬರೆಹದ ಕೇಂದ್ರವಾಗುವ ಬದಲಿಗೆ ಇಲ್ಲಿ ಲೋಕಾಂತವು ಬರೆಹದ ಕೇಂದ್ರವಾಗಿ ಸ್ಥಾಯಿ ಗೊಂಡಿರುವುದು’. 

‘ಕಣ್ಣ ಹನಿಗಳನ್ನು ಬಚ್ಚಿಟ್ಟಿದ್ದಾನೆಂಬ

ಗುಮಾನಿ ಇದ್ದರೆ 

ನನ್ನ ಕಣ್ಣುಗಳ ಬಗೆದು ನೋಡು’. 

‘ಕನಸುಗಳು ಮಾರಾಟಕ್ಕಿವೆ

ರಿಯಾಯತಿ ದರದಲ್ಲಿ 

ಪ್ರತಿ ಕನಸಿಗೂ ಖಚಿತ ದುಃಖದ ಉಡುಗೊರೆ ಉಚಿತ’.

ಇಂತಹ ಮಿಂಚುವ ಸಾಲುಗಳನ್ನು ಬರೆಯಬಲ್ಲ ಬಸಯ್ಯ ಸ್ವಾಮಿ ಹಲವಾರು ಕಡೆ ಕವಿತೆಯನ್ನು ಗದ್ಯದಂತೆ ನಿರ್ವಹಿಸಲು ಹೋಗಿ ಅದರ ಶಿಲ್ಪವನ್ನು ಸಡಿಲಗೊಳಿಸಿಬಿಡುತ್ತಾರೆ. ವ್ಯವಧಾನದಲ್ಲಿ, ಶ್ರದ್ಧೆಯಲ್ಲಿ ಮತ್ತು ಮರುಸಂಸ್ಕರಣೆಯ ಕುಲುಮೆಯಲ್ಲಿ ಪದ್ಯಾಯುಧವು ರೂಪುಗೊಂಡಾಗಲೇ ಅದಕ್ಕೆ ಹರಿತ ಜಾಸ್ತಿ. ಇದನ್ನು ಗಂಭೀರವಾಗಿ ಗಮನಿಸಿ ಅಳವಡಿಸಿಕೊಂಡರೆ ಅವರು ಕನ್ನಡ ಸಾಹಿತ್ಯ ಲೋಕದ ಭರವಸೆಯ ಕವಿಯಾಗುವುದರಲ್ಲಿ ಸಂಶಯವಿಲ್ಲ. 

About the Author

ಬಸಯ್ಯ ಸ್ವಾಮಿ ಕಮಲದಿನ್ನಿ
(01 June 1989)

ಬಸಯ್ಯಸ್ವಾಮಿ ಕಮಲದಿನ್ನಿ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಮದಿಹಾಳ ಗ್ರಾಮದವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಪದವಿ ಪಡೆದಿದ್ದಾರೆ. ಅದೇ ವಿಶ್ವವಿದ್ಯಾಲಯದಲ್ಲೇ ‘ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ’ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಕವಿತೆಗಳು ಕ್ರೈಸ್ಟ್ ಯ್ಯೂನಿವರ್ಸಿಟಿ, ಬೇಂದ್ರೆ ಅಂತರ ಕಾಲೇಜು ಸ್ಪರ್ದೆ ಒಳಗೊಂಡು ವಿವಿಧೆಡೆ ಪ್ರಶಸ್ತಿ ಗೌರವ ಪಡೆದಿವೆ. ಹೊಸತಲೆಮಾರಿನ ಕವಿಯಾಗಿರುವ ಬಸಯ್ಯ ಸ್ವಾಮಿ ಕಮಲದಿನ್ನಿಯವರು ‘ಅವಳೆದೆಯ ಡೈರಿಯೊಳಗೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.    ...

READ MORE

Related Books