ಕಿಚ್ಚಿನೊಳಗಿನ ಹೂವು

Author : ಚೇತನ್ ತಾವರೇಕೆರೆ

Pages 96

₹ 100.00
Year of Publication: 2020
Published by:  ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಕವಿ ಚೇತನ ತಾವರೇಕೆರೆ ಅವರ ಕವನ ಸಂಕಲನ- ಕಿಚ್ಚಿನೊಳಗಿನ ಹೂವು. ಸಾಹಿತಿ ಡಾ. ಕೆ. ಸಣ್ಣಹೊನ್ನಯ್ಯ ಕಂಟಲಕೆರೆ  ಕೃತಿಗೆ ಮುನ್ನುಡಿ ಬರೆದು ‘ನಾಡು-ನುಡಿಯ ಅಡಿ ಮುಡಿಗಳ ಕಂಡ ಅನುಭವವನ್ನೇ ಕವಿತೆಯಾಗಿಸುವಲ್ಲಿ ಕವಿಯು ಯಶಸ್ವಿಯಾಗಿದ್ದಾನೆ. ಕವನಗಳಲ್ಲಿ ಸಮಾಜಮುಖಿ, ಸಮಾನತೆಯ ತಿಳಿವು ಇದೆ. ಸಾಮಾಜಿಕ ಹೊಣೆಗಾರಿಕೆಯೂ ಇದೆ’ ಎಂದು ಪ್ರಶಂಸಿಸಿದ್ದರೆ ಸಾಹಿತಿ ಎಂ.ವಿ. ನೆಗಳೂರು ಅವರು ಕೃತಿಗೆ ಬೆನ್ನುಡಿ ಬರೆದು ‘ಕವಿಗಳು ತಮ್ಮ ವಯೋಮಾನಕ್ಕೆ ಮೀರಿ ಉತ್ತಮ ಕವನಗಳನ್ನು ಬರೆಯುವ ಮೂಲಕ ‘ಕಿಚ್ಚಿನೊಳಗಿನ ಹೂವು’ ಕೃತಿ ದಾಖಲಿಸಿರುವುದು ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಚೇತನ್ ತಾವರೇಕೆರೆ
(28 August 2001)

ಕವಿ ಚೇತನ್ ತಾವರೇಕೆರೆ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯವರು. ತಂದೆ ವೆಂಕಟೇಶ್ ಮೂರ್ತಿ ತಾಯಿ ಮಂಗಳಮ್ಮ. ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ. ಕೃತಿಗಳು: ಕಿಚ್ಚಿನೊಳಗಿನ ಹೂವು (ಕವನ ಸಂಕಲನ) ...

READ MORE

Related Books