ಉತ್ತರಾರ್ಧ ಸಮಗ್ರ ಕವಿತೆಗಳು -2

Author : ಎಚ್. ಎಸ್. ವೆಂಕಟೇಶಮೂರ್ತಿ

Pages 392

₹ 350.00
Year of Publication: 2021
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08040917099

Synopsys

‘ಉತ್ತರಾರ್ಧ ಸಮಗ್ರ ಕವಿತೆಗಳು -2’ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಮಗ್ರ ಕವಿತೆಗಳ ಸಂಕಲನ. ಉತ್ತರಾಯಣದ ನಂತರ ಎಚ್.ಎಸ್. ವೆಂಕಟೇಶಮೂರ್ತಿ ಅವರ ಆರು ಬಿಡಿ ಕವಿತೆಗಳ ಸಂಗ್ರಹಗಳು ಪ್ರಕಟವಾಗಿವೆ. ಅದು 2011 ರಿಂದ 2020ರ ವರೆಗಿನ ಒಂಬತ್ತು ವರ್ಷಗಳ ಕಾಲಾವಧಿ. ಉತ್ತರಾರ್ಧ ಎಂಬ ಹೆಸರಿನಲ್ಲಿ ಅವರ ಸಮಗ್ರಕಾವ್ಯದ ಈ ಎರಡನೇ ಸಂಪುಟ ಪ್ರಕಟವಾಗಿದೆ. ಈ ಕೃತಿಗೆ ಯು.ಆರ್. ಅನಂತಮೂರ್ತಿ ಅವರ ಮುನ್ನುಡಿ ಬರೆದಿದ್ದಾರೆ. ಕನ್ನಡ ಕಾವ್ಯಪರಂಪರೆಯ ಅತ್ಯುತ್ತಮ ಎನ್ನಿಸುವ ಗುಣಗಳನ್ನು ಮೈಗೂಡಿಸಿಕೊಂಡು ನಮ್ಮ ಕಾಲಕ್ಕೂ ಸಲ್ಲುವಂತೆ ಬರೆಯುವ ಮಹತ್ವದ ಕವಿ ವೆಂಕಟೇಶಮೂರ್ತಿ. ಬಾಲ್ಯದ ಬೆರಗು, ಯೌವನದ ಜೀವನಪ್ರೀತಿ, ತಿಳಿಹಾಸ್ಯ, ಸುಖದುಃಖಗಳನ್ನು ಕಂಡ ಪರಿಪಕ್ವವಾದ ಸಂಸಾರಿಯ ವಿನಯ-ಇವು ಮೂರ್ತಿಯವರನ್ನು ನಮ್ಮ ಕಾಲದ ಮುಖ್ಯ ಲೇಖಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಪರಂಪರೆಯ ಜ್ಞಾನ, ಪ್ರಯೋಗಶೀಲತೆ-ಎರಡೂ ಒಟ್ಟಾಗಿ ಕಾಣುವ ವಿಶಿಷ್ಟತೆ ಎಚ್ಚೆಸ್ವಿ ಕಾವ್ಯಕ್ಕಿದೆ ಎಂದಿದ್ದಾರೆ ಯು.ಆರ್.ಅನಂತಮೂರ್ತಿ. ಪ್ರತಿಭೆ ಇಲ್ಲದೆ, ನಿರಹಂಕಾರದ ಆತ್ಮರತವಲ್ಲದ ತಪಸ್ಸಿಲ್ಲದೆ, ಇಂತಹ ಸಾಧನೆ ಸಾಧ್ಯವಾಗದು ಎಂದಿದ್ದಾರೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books