ಪ್ರೇಮ ವಿರಾಗಿಯ ನಡುಗತ್ತಲ ಕವಿತೆ

Author : ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ

Pages 87

₹ 80.00




Year of Publication: 2020
Published by: ದೀವಟಿಗೆ
Address: #249, ಕನಕಪುರ ಮುಖ್ಯರಸ್ತೆ, ಇಂಡ್ಲವಾಡಿ (ಗ್ರಾಮ&ಪೋಸ್ಟ್) ಆನೇಕಲ್, ಬೆಂಗಳೂರು- 562106
Phone: 8884869602

Synopsys

‘ಪ್ರೇಮ ವಿರಾಗಿಯ ನಡುಗತ್ತಲ ಕವಿತೆ’ ಯುವ ಬರಹಗಾರ ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ ಅವರ ಕವನ ಸಂಕಲನ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದ ಕೃತಿಯಾಗಿದೆ. ಹಿರಿಯ ಲೇಖಕ ಕೆ.ವೈ. ನಾರಾಯಣಸ್ವಾಮಿ ಮುನ್ನುಡಿ ಹಾಗೂಕವಯತ್ರಿ ವಿ ಎಚ್.ಎಲ್. ಪುಷ್ಪ ಅವರು ಬೆನ್ನುಡಿ ಬರೆದಿದ್ದಾರೆ. ‘ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ ಕಾವ್ಯ ಹಾಗೂ ಜೀವನದ ಕಡುಪ್ರೇಮಿ ಪ್ರೇಮಕ್ಕೂ, ಭೋಗಕ್ಕೂ ವ್ಯತ್ಯಾಸವಿದೆ. ಪ್ರೇಮಿಯ ಯೌವ್ವನದ ಮನಸ್ಸು ಮೊದಲ ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆದರೆ ಎರಡನೇ ಹಂತದಲ್ಲಿ ದೇಹಸಂತಸಕ್ಕಾಗಿ ಕನವರಿಸುತ್ತದೆ. ಇಲ್ಲಿನ ಕವಿತೆಗಳಲ್ಲಿ ತನ್ನಿಂದ ದೂರಾದ ಯಕ್ಷಿಯ ಸಂಗಕ್ಕಾಗಿ ಯಕ್ಷನೊಬ್ಬ ಅನವರತ ಕಾತರಿಸುತ್ತಿದ್ದಾನೆ’ ಎಂದು ಕವಿತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಚ್.ಎಲ್. ಪುಷ್ಪ.

ಸಾಮಾನ್ಯವಾಗಿ ಮೊದಲ ಸಂಕಲನದಲ್ಲಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಹಾಗೂ ಪ್ರಣಯದ ಬಗ್ಗೆ ಕಾತರಿಸುವಿಕೆ ಕಂಡುಬರುತ್ತದೆ. ಇಲ್ಲಿಯ ಕವಿತೆಗಳಲ್ಲಿ ಜೀವನದ ಬಗ್ಗೆ ಪ್ರೀತಿ ಹಾಗೂ ಕಕ್ಕುಲಾತಿ ಎದ್ದುಕಾಣುತ್ತದೆ. ಹೊಸ ಹರೆಯದ ಉಲ್ಲಾಸ ಹಾಗೂ ಸಂಭ್ರಮಗಳೇ ಇಲ್ಲಿಯ ಕವಿತೆಗಳ ಸ್ಥಾಯಿಗುಣ. ನಿರ್ದಿಷ್ಟವಾದ ಚಳವಳಿ ಹಾಗೂ ವಿಚಾರಧಾರೆಗಳ ಬಗ್ಗೆ ಚಿಂತನೆಗಳಿಲ್ಲದಿದ್ದರೂ ವಯೋಸಹಜವಾದ ಕಾಡುವಿಕೆಗಳೇ ಇಲ್ಲಿಯ ಕವಿತೆಗಳೇ ಮುಖ್ಯವಾಗಿ ತೋರುತ್ತವೆ ಎಂಬುದು ಪುಷ್ಪ ಅವರ ಅಭಿಪ್ರಾಯ.

About the Author

ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ

ಎಂ.ಜಿ. ಕೃಷ್ಣಮೂರ್ತಿ ಇಂಡ್ಲವಾಡಿ ಅವರು ಆನೇಕಲ್ ತಾಲೂಕಿನ ಇಂಡ್ಲವಾಡಿಯವರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ. ಎ.(ಕನ್ನಡ)  ಪದವೀಧರರು. ಕವಿತೆ, ಲೇಖನ ಬರೆಯುವ ಹವ್ಯಾಸಿ. ‘ ದೀವಟಿಗೆ ಬೆಂಗಳೂರು’ ಎಂಬ ಸಾಹಿತ್ಯಕ ಗುಂಪಿನ ಸಂಸ್ಥಾಪಕ ಸದಸ್ಯರು ಹಾಗೂ ದೀವಟಿಗೆ ಕೈ ಬರಹ ಪತ್ರಿಕೆಯ ಸಂಪಾದಕರು. ‘ಪ್ರೇಮ ವಿರಾಗಿ ನಡುಗತ್ತಲ ಕವಿತೆ’ ಇವರ ಮೊದಲ ಕವನ ಸಂಕಲನ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಕರಾಗಿದ್ದಾರೆ. ...

READ MORE

Related Books