ಮಗಳು ಹೋಗಿದ್ದಾಳೆ ಶಾಲೆಗೆ

Author : ಸುಕನ್ಯಾ ಕಳಸ

Pages 80

₹ 75.00




Year of Publication: 2022
Published by: ಅಭಿನವ ಪ್ರಕಾಶನ
Address: ಮಾರೇನ ಹಳ್ಳಿ, ವಿಜಯನಗರ, ಬೆಂಗಳೂರು- 560 040
Phone: 9448804905

Synopsys

ಮಗಳು ಹೋಗಿದ್ದಾಳೆ ಶಾಲೆಗೆ ಕವನ ಸಂಕಲನವು ಸುಕನ್ಯ ಕಳಸ ಅವರ ಕವನಸಂಕಲನ.”ಅರ್ಥ, ಧ್ವನಿ ಮತ್ತು ಲಯಗಳ ಜೊತೆಗೆ ಈ ಕವಿತೆಗಳ ಭಾಷೆಗೆ “ಬಣ್ಣವಿದೆ, ರೂಪವಿದೆ, ಆಕಾರವಿದೆ, ರುಬಿಯೂ ಇದೆ.” ಭಾಷೆ ಅರ್ಥವನ್ನಷ್ಟೇ ರವಾನಿಸುವ ಬಡವಾಹಕವಾಗದೆ ಕೇವಲ ಲಯಬದ್ಧ ಧ್ವನಿಯೂ ಆಗದೆ ಒಂದು ಚೈತನ್ಯವಾಗಿ ನಮ್ಮೆದುರು ರೂಪ ತಳೆದು ನಿಲ್ಲುವ ಕೌತುಕ ಇಲ್ಲಿನ ಕವಿತೆಗಳಲ್ಲಿ ಸಂಭವಿಸುತ್ತದೆ. ಈ ಸಂಕಲನದ ಕಏತೆಗಳನ್ನು ಹೆಣ್ಣಿನ ಜೀವನಾನುಭವದ ಅರು ಕಥನಗಳು ಎಂಬ ಬಗೆಯಲ್ಲೂ ಓದಬಹುದು. ಸಂಕಲನದ ಹೆಚ್ಚಿನ ಕವಿತೆಗಳು ಕವಯಿತ್ರಿ ಹೆಣ್ಣಾಗಿ, ಕೃಷ್ಣನನ್ನು ಸದಾ ಹಂಬಲಿಸುವ ವಿರಹಿಣಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ ತನ್ನ ಪಾಡನ್ನು ಹೇಳಿಕೊಳ್ಳುವ ಸ್ವಗತಗಳಾದರೆ 'ಜ್ಞಾನೋದಯ' ಎಂಬ ಕವಿತೆಯನ್ನು ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಕಡ್ಡಾಯ ಪಠ್ಯವಾಗಿ ಓದಿಸಬೇಕು. ಜನಾಂಗ ದ್ವೇಷದ ವ್ಯಾಧಿಗ್ರಸ್ತ ಮನಃಸ್ಥಿತಿಯ ಹಿನ್ನೆಲೆಯಲ್ಲಿ 'ಜ್ಞಾನೋದಯ'ದಂತಹ ಕವಿತೆಗಳ ಓದು ನಮ್ಮ ಯುವಕ ಯುವತಿಯರಿಗೆ ಅತ್ಯಗತ್ಯ. ಕಾವೋದ್ಯೋಗವೆಂದರೆ ಮಾತಿನ ರಾಶಿಯಲ್ಲಿ ಸತ್ಯವನ್ನು ಅರಸುವುದು, ಕವಯಿತ್ರಿ ತನ್ನ ನೋವಿನಲ್ಲೂ ತನ್ನ ಮತ್ತು ಮಗಳ ಮುಗ್ಧ ಬಾಲ್ಯದ ಬಿಳಿ ಲಂಗದ ಜಳಿಯನ್ನು ನೆನೆಯುವುದು ಸತ್ಯದ ಅರಸುವಿಕೆ ಮಾತ್ರವಲ್ಲ; ಅದು ಸತ್ಯಕ್ಕಾಗಿ ಮಾಡುವ ಆಗ್ರಹವೂ ಹೌದು’ ಎಂದು ಜಿ. ರಾಜಶೇಖರ ಅವರು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುಕನ್ಯಾ ಕಳಸ
(13 May 1960)

ಕವಯಿತ್ರಿ ಸುಕನ್ಯಾ ಕಳಸ (ಜನನ: 13-05-1960) ಚಿಕ್ಕಮಗಳೂರಿನ ಕಳಸದವರು. ತಂದೆ ಎಚ್.ಪುಟ್ಟದೇವರಯ್ಯ, ತಾಯಿ ನಾಗಮ್ಮ. ಕಳಸದಲ್ಲಿ ಹೂಸ್ಕೂಲ್ ಶಿಕ್ಷಣ, ಶಿವಮೊಗ್ಗದಲ್ಲಿ ಕಾಲೇಜು, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ. ಪದವೀಧರರು. ಅಂಚೆ ಇಲಾಖೆಯಲ್ವಿಲಿ ಉದ್ಯೋಗ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದ ಎಂ.ಎ. ಪದವೀಧರರು. 2006 ಮಾರ್ಚ್‌ನಲ್ಲಿ ಸ್ವಯಂ ನಿವೃತ್ತಿ. ಇವರು ಬರೆದ ಭಾವಗೀತೆಗಳಿಗೆ ಎಚ್.ಆರ್. ಲೀಲಾವತಿಯವರಿಂದ ರಾಗ ಸಂಯೋಜನೆ, ಮಂಗಳೂರು ಆಕಾಶವಾಣಿಯಿಂದ ಪ್ರಸಾರ. ಹಲವಾರು ರಚನೆಗಳು ದೂರದರ್ಶನದಲ್ಲಿ ಪ್ರಸ್ತುತ. ನಾಟಕದಲ್ಲಿ ಅಭಿನಯ, ನಿರ್ದೇಶನದ ಅನುಭವ. ಜಾನಪದ ಗೀತಗಾಯನದಲ್ಲಿ ವಿಶೇಷ ಪರಿಶ್ರಮ. ಶಾಸ್ತ್ರೀಯ ಸಂಗೀತದಲ್ಲೂ ಪರಿಣತಿ ...

READ MORE

Related Books