ಬಯಲ ಬೆರಗು

Author : ಕುಮಾರ ಬೇಂದ್ರೆ

Pages 90

₹ 65.00




Year of Publication: 2017
Published by: ದಕ್ಷಾಯಿನಿ ಪ್ರಕಾಶನ
Address: # 149/1, ಎಫ್131, ವೀಣೇಶಾಮಣ್ಣ ರಸ್ತೆ, ಮೈಸೂರು- 570 004

Synopsys

‘ಬಯಲ ಬೆರಗು’  ಕವಿ, ಲೇಖಕ ಕುಮಾರ ಬೇಂದ್ರೆ ಅವರ ಕವನ ಸಂಕಲನ. ಕುಮಾರ ಬೇಂದ್ರೆ ಈಗಾಗಲೇ ಸಾಕಷ್ಟು ಹೆಸರು ಮಾಡಿದ ಯುವ ಲೇಖಕರು. ಕಾವ್ಯ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿ ಗಮನ ಸೆಳೆದವರು. 'ಬಯಲು ಬೆರಗು' ಬೇಂದ್ರೆಯವರ ಮೂರನೇ ಕವನ ಸಂಕಲನ. 'ತುಮುಲ' 'ಕಾಲಯಾನ' ಇವೆರಡು ಮೊದಲಿನ ಸಂಕಲನಗಳು, ವಿಶೇಷವೆಂದರೆ ಹನ್ನೆರಡು ವರ್ಷಗಳ ನಂತರ “ಬಯಲು ಬೆರಗು' ಸಂಕಲನ ಹೊರ ಬರುತ್ತಿರುವುದು. ಸಮಯದ ಒತ್ತಡ ಮತ್ತು ಕವಿಯ ಸಂಯಮ ಎರಡೂ ಇದಕ್ಕೆ ಕಾರಣವಾಗಿವೆ ಎಂದು ಭಾವಿಸಬಹುದು.

ಕುಮಾರ ಬೇಂದ್ರೆ, ಕಾವ್ಯದ ಸಂಗಡ ಸರಿಸಮವಾಗಿ ಗದ್ಯ ಕೃಷಿಯನ್ನೂ ಮಾಡಿದ್ದಾರೆ. ಒಬ್ಬ ಕಲಾವಿದರಾಗಿ ಪತ್ರಕರ್ತರಾಗಿ, ಒಂದಿಷ್ಟು ಚಲನಚಿತ್ರ ಮಾಧ್ಯಮದಲ್ಲಿಯೂ ಕೈಯಾಡಿಸಿ ತಮ್ಮ ಮೂಲ ಪ್ರತಿಭೆಗೆ ಹಲವು ವಿಸ್ತಾರಗಳನ್ನು ಕಂಡುಕೊಂಡಿದ್ದಾರೆ. ಎಲ್ಲ ಆಗು ಹೋಗುಗಳನ್ನು ತುಂಬ ಆಪ್ತ ಧಾಟಿಯಲ್ಲಿ, ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಹಾಗೂ ಸಂಯಮದಿಂದ ಬರೆಯುವ ಸಹಜ ಕವಿ...“ಬಯಲು ಬೆರಗು' ಒಂದು ಸಂಕೀರ್ಣವಾದ ರೂಪಾಂತರಗಳನ್ನು ಮನಸ್ಸಿನಲ್ಲಿ ಮೂಡಿಸುವ ಹೆಸರು. ಅಲ್ಲಮಪ್ರಭುವಿನ ಹಾದಿಯದು. ವಚನ ಚಳವಳಿಯಲ್ಲಿ ಸಿದ್ಧಾಂತಗಳನ್ನು ರೂಪಕಗಳಲ್ಲಿ ಕಟ್ಟಿಕೊಟ್ಟ ವಚನಕಾರ ಅಲ್ಲಮಪ್ರಭುದೇವರು. ಎಲ್ಲ ಕಾಲದಲ್ಲಿಯೂ ಹಲವು ನಿನಾದಗಳನ್ನು ತಂತು ವಾದ್ಯದಂತೆ ಅರ್ಥ ವಿಸ್ತಾರಗಳನ್ನು ಸುರಿಸುವ ಅಲ್ಲಮಪ್ರಭುದೇವರು, ಕವಿಗಳಿಗೆ ತುಂಬ ಹತ್ತಿರವಾದ ವಚನಕಾರ ಎನಿಸುತ್ತದೆ. 

ಕುಮಾರ ಬೇಂದ್ರೆಯವರ 'ಬಯಲು ಬೆರಗು' ಸಂಕಲನದ ಎಲ್ಲ ಕವಿತೆಗಳನ್ನು ವಿಭಿನ್ನವಾಗಿವೆ. ಜೊತೆಗೆ ಒಮ್ಮೊಮ್ಮೆ ಸಂಕೀರ್ಣ, ಮತ್ತೊಮ್ಮೆ ಸರಳ ಸಹಜವಾಗಿ ತೆರೆದುಕೊಳ್ಳುವ ಗುಣವುಳ್ಳ ಈ ಕವಿತೆಗಳು ನಮ್ಮನ್ನು ಕಾಡುತ್ತವೆ. ಹಲವು ಪ್ರಶ್ನೆಗಳನ್ನು ಕೇಳುತ್ತವೆ. ಇವು ವರ್ತಮಾನದಿಂದ ಮುಕ್ತಿ ಬೇಡುತ್ತ, ಹೊಸ ಪರಿಕ್ರಮಣ ಬಯಸುವ ಕವಿತೆಗಳು ಈ ಸಂಕಲನದಲ್ಲಿವೆ. 

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books