ರಾಗಿ ಕಾಳು

Author : ಚೀಮನಹಳ್ಳಿ ರಮೇಶಬಾಬು

₹ 100.00
Published by: ಅನಿಮ ಪುಸ್ತಕ ಪ್ರಕಾಶನ
Address: ಚೀಮನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆ

Synopsys

ಲೇಖಕ ಚೀಮನಹಳ್ಳಿ ರಮೇಶಬಾಬು ಅವರ ಕವನ ಸಂಕಲನ-ರಾಗಿ ಕಾಳು. ಈ ಕೃತಿಗೆ ಬೆನ್ನುಡಿ ಬರೆದಿರುವ ಲೇಖಕಿ ಆರ್. ತಾರಿಣಿ ಶುಭದಾಯಿನಿ ಅವರು, ರಮೇಶ ಬಾಬು ಅವರ ಕತೆಗಳನ್ನು ಓದುತ್ತಾ ಇರುವಾಗ ಸಮಕಾಲೀನ ಕಾವ್ಯದ ಬದುಕು ಕುರಿತು ನನ್ನಲ್ಲಿ ಹಲವಾರು ಅಂಶಗಳು ಹಾರಿಹೋದವು. ಸಮಕಾಲೀನವಾಗಿ ಕವಿತೆ ಬರೆಯುವುದು ವಿಪರೀತ ಸಮಕಾಲೀನ ಕೆಲಸವಾಗಿದ್ದು, ಇದು ಕ್ಲೀಷೆಯ ಮಾತಲ್ಲ. ಕಾವ್ಯ ಕಟ್ಟುವವನಿಗೆ ಪ್ರತಿ ಯುಗದಲ್ಲೂ ಸವಾಲುಗಳಿರುತ್ತವೆ. ಆದರೆ, ರೂಢಿಯಲ್ಲಿ ಉತ್ತಮನೆನಿಸಿಕೊಳ್ಳುವ ಒಳ ಆಸೆಯಿಂದ ಕವಿ ಬರೆಯತೊಡಗುತ್ತಾನಾದ್ದರಿಂದ ಯುಗದ ಸಂವೇದನೆಯನ್ನು ತನ್ನ ಬರವಣಿಗೆಗೆ ಬಗ್ಗಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಇಲ್ಲಿರುವ ರಚನೆಗಳಲ್ಲಿ ಕಾವ್ಯದ ಆತ್ಮದ ಇರವು ಹಾಗೂ ಅದರ ಸಂರಚನೆಯ ಹಂದರಗಳು ಕಾವ್ಯದ ಸಾಂಪ್ರದಾಯಿಕ ಲಕ್ಷ್ಮಣರೇಖೆಗಳನ್ನು ದಾಟಿ ಸ್ವಾತಂತ್ಯವನ್ನು ನೆಚ್ಚಿಕೊಂಡಿವೆ. ಕಾವ್ಯರಚನೆಯನ್ನು ಗ್ರಹಿಸಿ ಅದನ್ನು ಮರುರಚಿಸಬೇಕೆನ್ನುವ ಹಂಬಲವುಳ್ಳ ರಮೇಶಬಾಬು ಅವರಿಗೆ ಸಮಕಾಲೀನ ಕಾವ್ಯ ಎತ್ತುವ ಕಂಟೆಂಟ್ ಮತ್ತು ಸಂರಚನೆಯ ಕಷ್ಟಗಳು ತಿಳಿದಿವೆ. ಅವರ ಈ ಹೊಸ ಸಂಕಲನದ ಕವಿತೆಗಳಲ್ಲಿ ಒಂದು ಬಗೆಯ ಎಚ್ಚರ ಕಾಣುತ್ತದೆ. ಹೊಸ ಕಾವ್ಯದಲ್ಲಿ ವಸ್ತು ಮುಖ್ಯವೊ, ಸಂರಚನೆ ಮುಖ್ಯವೊ ಎನ್ನುವ ಸಂದಿಗ್ಧ ಅವರನ್ನು ಕಾಡಿದೆ.ಇಲ್ಲಿ ಅನೇಕ ಆತ್ಮನಿರೀಕ್ಷೆಯ ಸಾಲುಗಳಿದ್ದು, ಅವು ಕವಿತೆಯ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

About the Author

ಚೀಮನಹಳ್ಳಿ ರಮೇಶಬಾಬು
(10 July 1974)

ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ  ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...

READ MORE

Related Books