ದಾರಿನೆಂಟ

Author : ಲಲಿತಾ ಸಿದ್ದಬಸವಯ್ಯ

Pages 84

₹ 50.00




Year of Publication: 2009
Published by: ಚಿನ್ಮಯಿ ಪ್ರಕಾಶನ
Address: #5217, ಗುರುಸನ್ನಿಧಿ, 2ನೇ ಕ್ರಾಸ್ ಅಶೋಕ ನಗರ, ತುಮಕೂರು-572102

Synopsys

ಕವಿ ಲಲಿತಾ ಸಿದ್ಧಬಸವಯ್ಯ ಅವರ 51 ಕವಿತೆಗಳ ಸಂಕಲನ ದಾರಿನೆಂಟ. ಕವಿತೆ ಮೂಲತಃ ಇಹದ ಸ್ವರವೇ. ನೆನಪು, ಕನಸು, ಆಶಯಗಳನ್ನು, ವಾಸ್ತವದೊಂದಿಗಿನ ಮುಖಾಮುಖಿಯನ್ನು, ಪ್ರತಿಕ್ರಿಯೆಯನ್ನು ಜತನವಾಗಿ ಮಾತುಗಳಲ್ಲಿ ಹಿಡಿದಿಟ್ಟು ಓದುಗರ ಮನಸ್ಸಿನಲ್ಲಿ ರಸ ಹುಟ್ಟಿಸುವಂತೆ ಮಾಡುವ ಕಲೆಗಾರಿಕೆ. ನಿರ್ದಿಷ್ಟ ನೆಲೆಗೆ ಬಿಗಿದುಕೊಲ್ಳದೆ ಬೇರೆ ಬೇರೆಯ ಸ್ತರಗಳಿಗೆ ಜಿಗಿಯುವ ಸಾಮರ್ಥ್ಯವಿರುವ ಕವಿತೆ ಪಡೆದುಕೊಳ್ಳುವ ಗೆಲುವೇ ಬೇರೆ. ಲಲಿತಾ ಸಿದ್ಧಬಸವಯ್ಯನವರು ಇಂಥಾ ದಾರಿ ತುಳಿಯುತ್ತಿದ್ದಾರೆ ಎಂದಿದ್ದಾರೆ ಡಾ.ಜಿ.ಎಸ್. ಶಿವರುದ್ರಪ್ಪ. ಇಲ್ಲಿ ಲಲಿತಾ ಸಿದ್ಧಬಸವಯ್ಯ ನವರ ವಿಭಿನ್ನ ಕಾವ್ಯ ಶೈಲಿಯನ್ನು ಒಳಗೊಂಡ 51 ಕವಿತೆಗಳು ಸಂಕಲನಗೊಂಡಿವೆ.

About the Author

ಲಲಿತಾ ಸಿದ್ದಬಸವಯ್ಯ
(27 February 1955)

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.  ...

READ MORE

Related Books