ನೂರು ಹನಿಗಳು

Author : ಬಸವರಾಜ ಸಬರದ

Pages 120

₹ 20.00




Year of Publication: 1988
Published by: ಗ್ರಿನೋಬೆಲ್ಸ್ ಪ್ರಕಾಶನ
Address: ಕಲಬುರಗಿ

Synopsys

‘ನೂರು ಹನಿಗಳು’ ಲೇಖಕ ಬಸವರಾಜ ಸಬರದ ಅವರ ನೂರು ಹನಿಗವಿತೆಗಳ ಸಂಕಲನ. ಈ ಕೃತಿಗೆ ಕುಂ.ವೀರಭದ್ರಪ್ಪ, ಕಮಲಾ ಹೆಮ್ಮಿಗೆ, ಹಾಗೂ ಎಚ್.ಎಸ್. ಮುಕ್ತಾಯಕ್ಕ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಕಾವ್ಯ ಯಾರಿಗೂ ಅರ್ಥವಾಗಬಾರದೆಂಬ ಕವಿಗಳನ್ನು ಸಮರ್ಥಿಸುತ್ತಾ ಮುಸುಕಿನೊಳಗೆ ಬರೆಯುವ ವಿಮರ್ಶಕರ ನಡುವೆ ಕಡ್ಡಿ ಮುರಿದಂತೆ ಮಾತನಾಡುವ ಅಗತ್ಯವನ್ನು ಒಪ್ಪಿಕೊಂಡು ಬರೆಯುತ್ತಿರುವುದರಿಂದ ಡಾ. ಸಬರದ ಪ್ರಮುಖರಾಗುತ್ತಾರೆ’ ಎನ್ನುತ್ತಾರೆ ಕುಂ.ವೀರಭದ್ರಪ್ಪ. ಹಾಗೆ ಬದುಕಿನೊಡನೆ ಬರುವ ಸಹಜವಾದ ಅನುಭವಗಳನ್ನು ಡಾ. ಸಬರದ ಅವರು ಚಿಕ್ಕ-ಚಿಕ್ಕ ಪದ್ಯಗಳಲ್ಲಿ ಚೊಕ್ಕವಾಗಿ, ಸಮರ್ಥವಾಗಿ ಸೆರೆಹಿಡಿದಿದ್ದಾರೆ. ಇದಕ್ಕೆ ಪ್ರಾದೇಶಿಕ ಭಾಷೆಯ ಸೊಗಡೂ ಸತ್ವವೂ ಸೇರಿಕೊಂಡು ಕವನಗಳು ಇನ್ನಷ್ಟು ಗಟ್ಟಿಯೂ ಆತ್ಮೀಯವೂ ಆಗುತ್ತಾ ಹೋಗುತ್ತವೆ ಎಂದಿದ್ದಾರೆ ಎಚ್.ಎಸ್. ಮುಕ್ತಾಯಕ್ಕ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books