ಜಾಲಿ ಹೂಗಳ ನಡುವೆ

Author : ಬಿ. ಪೀರ್ ಬಾಷ

Pages 80

₹ 45.00
Year of Publication: 2000
Published by: ಲೋಹಿಯ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ- 583103
Phone: 0839274909

Synopsys

‘ಜಾಲಿ ಹೂಗಳ ನಡುವೆ’ ಕವಿ ಪೀರ್ ಬಾಷ ಅವರ ಕವನ ಸಂಕಲನ. ಈ ಕೃತಿ ಬಳ್ಳಾರಿಯ ಬಡಜನರ ಕಷ್ಟ, ಗಟ್ಟಿತನ ಮತ್ತು ಚಿನ್ನದಂತೆ ಹೊಳೆಯುವ ಆಸೆಗಳ ಸಂಕೇತವಷ್ಟೇ ಅಲ್ಲ. ಜಗತ್ತಿನಲ್ಲಿ ತುಳಿತಕ್ಕೊಳಗಾದವರ, ಹೊಸ ಬದುಕಿನ ಕನಸಿನಲ್ಲೇ ಸತ್ತು ಹೋದವರ ಮತ್ತು ಒಂದಿಷ್ಟು ಬದಲಾವಣೆ ಕಾಣಬಹುದೆಂದು ಮುನ್ನೆಡೆಯುತ್ತಿರುವವರ ಪ್ರತೀಕವಾಗಿವೆ.

ಕವಿ ಸಮಯದಲ್ಲಿ ಪುರುಷ ತನ್ನ ಸ್ಪರ್ಶದಿಂದ ಕಬ್ಬಿಣವನ್ನು ಚಿನ್ನ ಮಾಡುವುದು, ಬಡತನಕ್ಕೆ ಕಾವ್ಯದ ಸ್ಪರ್ಶವಾದಾಗ ಆ ಬಡತನದಲ್ಲಿ ಹುದುಗಿರುವ ಪ್ರೀತಿ, ಅಸಹಾಯಕತೆ, ಶಕ್ತಿ ಮತ್ತು ಆಶಯಗಳು ಹೊರಹೊಮ್ಮ ತೊಡಗುತ್ತವೆ. ಪೀರ್ ಬಾಷರ ಕವನಗಳಲ್ಲಿ ಈ ಹೊರಹೊಮ್ಮುವಿಕೆಯನ್ನು ಕಾಣಬಹುದು.

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books