ಬಿಸಿಲ್ಗುದುರೆಯ ನೋವು

Author : ಸುನೈಫ್

Pages 116

₹ 100.00
Year of Publication: 2020
Published by: ನಿರಂತರ ಪ್ರಕಾಶನ
Address: ಎಂ.ಆರ್ ಅತ್ತರ್ ಕಟ್ಟಡ, 5 ನೇ ಕ್ರಾಸ್, ಅಮರೇಶ್ವರ ನಗರ , ಗದಗ್ - 582103
Phone: 9606276591

Synopsys

ಸುತ್ತಿದ ಊರುಗಳು, ಕಂಡ ಬದುಕು, ಅನುಭವಿಸಿದ ನೋವು, ಹತಾಶೆ, ಪ್ರೇಮ ಮತ್ತು ಭರವಸೆಗಳ ಕವಿತಾಭಾವಗಳ ಗುಚ್ಛ `ಬಿಸಿಲ್ಗುದುರೆಯ ನೋವು'. ಕಲುಷಿತಗೊಂಡ ಇತ್ತೀಚಿನ ಸಾಮಾಜಿಕ ವಾತಾವರಣಕ್ಕೆ ದನಿಯಾಗುವ ಕವಿತೆಗಳನ್ನು ಸೊಗಸಾಗಿ ಇಲ್ಲಿ ನಿರೂಪಿಸಿದ್ದಾರೆ ಯುವ ಕವಿ ಸುನೈಫ್. ಸ್ವಸ್ಥ ಸಮಾಜದ ಸ್ವಸ್ಥ ಕನವರಿಕೆಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ.

About the Author

ಸುನೈಫ್

ಸುನೈಫ್, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರು. ಸದ್ಯ ಉದ್ಯೋಗ ನಿಮಿತ್ತ ಕಲ್ಲಿಕೋಟೆಯಲ್ಲಿ ವಾಸವಿದ್ದಾರೆ. ಕವಿತೆ ಮತ್ತು ಅನುವಾದ ಇವರ ಇಷ್ಟದ ಹವ್ಯಾಸ .ಮಲೆಯಾಳಂ ಭಾಷೆಯಿಂದ ಹಲವು ಕಥೆ ಮತ್ತು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೂಫಿ ಕಾವ್ಯಾನುವಾದಲ್ಲೂ ತೊಡಗಿಸಿಕೊಂಡಿದ್ದಾರೆ. ಮಲೆಯಾಳಂ ಪ್ರಮುಖ ಕತೆಗಾರ ವೈ.ಕಂ. ಮುಹಮದ್ ಬಷೀರ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ‘ಭೂಮಿಯ ಹಕ್ಕುದಾರರು’ ಅವರ ಪ್ರಕಟಿತ ಕೃತಿ. ...

READ MORE

Related Books