ಶ್ರೀಮಾತಾ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 80

₹ 50.00




Year of Publication: 1968
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

1968ರಲ್ಲಿ ಮೊದಲಬಾರಿಗೆ ಪ್ರಕಟವಾದ ಶ್ರೀಮಾತಾ ಸಂಕಲನದಲ್ಲಿ 38 ಕವಿತೆಗಳಿವೆ. ಶ್ರೀಮಾತಾ ಕವನಗಳಲ್ಲಿ ಭಾರತದ ನವಶಕ್ತಿ , ಹೃದಯ ಸಮುದ್ರದಿಂದ ಉದ್ದರಿಸಿದ ಹಳೆಯ ಕವನವಾಗಿದೆ. ಇನ್ನುಳಿದ 38 ಹೊಸವು ಅದರೊಳಗಿನ 4-8 ಕವನಗಳು ಅಲ್ಲಲ್ಲಿ ಪ್ರಕಾಶ ಕಂಡಿವೆ ಎನ್ನುವ ಬೇಂದ್ರೆಯವರು ಈ ಸಂಕಲನದಲ್ಲಿನ 11-19 ರವರೆಗಿನ ಕವನಗಳು ಶ್ರೀ ಅರವಿಂದರ ವಚನ , ಕಾವ್ಯೊಕ್ತಿ , ಶ್ರೀ ಮಾತೆಯವರು ಜೋಡಿಸಿದ ಚಿತ್ರಮಾಲೆಗಳಿಂದ ಸ್ಪೂರ್ತಿಗೊಂಡಿವೆ ಎಂದು ತಿಳಿಸಿದ್ದಾರೆ. ಈ ಸಂಕಲನವನ್ನು ಬಹುತೇಕ ಕವಿತೆಗಳು 1967ರ ಕೊನೆ ಮತ್ತು 68ರ ಆರಂಭದ ಮಾರ್ಗಶಿರ ಮತ್ತು ಮಾಘಮಾಸದ ಉದಯ ಕಾಲಕ್ಕೆ ರಚಿಸಿದ ಕವಿತೆಗಳು ಎಂದಿದ್ದಾರೆ. ಆಂತರಿಕ ಉಪಾಸನೆಗೆ ಬಾಹ್ಯ ಸೌಂದರ್ಯಗಳು ಕಾವ್ಯ ಪ್ರಚೋದನೆ ಮಾಡಿವೆ ಎನ್ನುವ ಬೇಂದ್ರೆಯವರು ಸಂಖ್ಯಾ ಸೂತ್ರಗಳಿಂದ ನೆಯಗೆ ಹೊಂದಿದ ಕವನದ ಸಾಲುಗಳು ಕೆಲವೊಂದು ವಿಮರ್ಶೆಗೆ “ರಫೂ’ ಹಾಕಿದಂತೆ ತೋರಬಹುದು. ಈ ಸಂಕಲನವನ್ನು ಶ್ರೀ ಮಾತೆ, ಭೂಮಾತೆ, ಕನ್ನಡ ಮಾತೆ, ನಿಮಗಲ್ಲದೇ ಯಾರಿಗರ್ಪಿಸಲಿ ಎಂದು ಅಂದತ್ತ ಕೇಳಿದ್ದಾರೆ. ಅಂಬಿಕಾತನಯ ದತ್ತರು ಪದ್ಮಶ್ರೀ ಪಡೆದಾಗ ಎಂಬ ಕವಿತೆಯಲ್ಲಿ ಸಾಕೆನಿಸಬಾರದು, ಬೇಕೆನಿಸಬಾರದು,ಮಾನವನೂರಿನಿಂದ ದೇವರ ಕ್ವಾಟಿ ಕಡೆಗೆ ಸಾವಿರದ ಹಾದಿ ಅದಲಕ್ಷ ಇರಲಿ ಲಕ್ಷ ಎಂದು ಎಚ್ಚರಿಸಿದ್ದಾರೆ. ಮಹಾತ್ಮಾ ಬಸವಣ್ಣನವರ ಜೀವನವನ್ನು ಆಧರಿಸಿ ಋಷಬೊರೋರೊರತಿ ಎಂಬ ಕವಿತೆ ಮತ್ತು ಕೊಲ್ಲಿಪಾಕಿಯೊಳಗ ಎಂಬ ಕವಿತೆ ಆನಂದತೀರ್ಥರನ್ನು ಕುರಿತ ಕವಿತೆಗಳು ಈ ಸಂಕಲನದಲ್ಲಿವೆ. ಕನಕ ಎಂಬ ಕವಿತೆ ಕನಕದಾಸರನ್ನು ಕುರಿತ ಸೊಗಸಾದ ಪದ್ಯ ಹೊರಗಣ್ಣು, ಒಳಗಣ್ಣು , ಹೊಳೆಗಣ್ಣು,ತಿಳಿಗಣ್ಣು ನೀನೇ ತಿನಿಸಿದ ಹಣ್ಣು ಓ ದಾಸರ ದಾಸ ನಿನ್ನ ನೆನೆವೆ ಸದಾ ವಾಸ ಉಳಿದವಾದ ಆಭಾಸ ಲಕ್ಷ್ಮೇಶ , ಸರ್ವಜ್ಙರೊಡನೆ ನಿನ್ನ ಭಣಲೆ ಭಂಗಿ ಅಂಬಿಕಾತನಯ ತೊಟ್ಟಿರುವ ಅಂಗಿ. ಬೀದರಿನಲ್ಲಿ ನಡೆದ ಕವಿಗೊಷ್ಟಿಯಲ್ಲಿ ವಾಚನ ಮಾಡಿದ ಕವಿಗಳ ಕಾಣಿಕೆ ಎಂಬ ಕವಿತೆ ಬಹು ಸಂಸ್ಕ್ರತಿ, ಭಾಷೆಗಳನ್ನು ಬೆರಗು ಗಣ್ಣಿನಿಂದ ನೋಡುವಂತೆ ಮಾಡುತ್ತದೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books