ಕಾಡು ಮಲ್ಲೆ

Pages 168

₹ 150.00
Year of Publication: 2022
Published by: ಸಮನ್ವಿತ ಪ್ರಕಾಶನ
Address: #12,1ನೇ ಅಡ್ಡರಸ್ತೆ, ಮಂಜುನಾಥ ಲೇಔಟ್. ಅರೆಕೆರೆ ಮೈಕೋ ಲೇಔಟ್ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
Phone: 9844192952

Synopsys

‘ಕಾಡು ಮಲ್ಲೆ’ ಕೃತಿಯು ಸಾ.ನಾ ರಮೇಶ್ ಅವರ ಕವನ ಸಂಕಲನವಾಗಿದೆ. ಈ ಕೃತಿಗೆ ನಲ್ನುಡಿ ಬರೆದಿರುವ ಕೆ.ಎ. ದಯಾನಂದ ಐಎಎಸ್ ಅವರು, ಸಾಹಿತ್ಯದಲ್ಲಿ ಕಾವ್ಯ ಪ್ರಕಾರವೂ ಒಂದು. ಆ ಪ್ರಕಾರದಲ್ಲಿ ಇರಬೇಕಾದ ಛಂದಸ್ಸು, ಅಲಂಕಾರ, ವ್ಯಾಕರಣಬದ್ಧತೆಗಳು ಇವರ ಕವನದಲ್ಲಿ ಇದೆಯೋ ಇಲ್ಲವೋ ಎಂಬುದು ವಿದ್ವಾಂಸರ ವಿಮರ್ಶೆಯ ಕ್ಷೇತ್ರ, ಆದರೆ ಕವನಗಳು ತನ್ನ ಭಾವ ತೀವ್ರತೆಯಿಂದ ಓದುಗರ ಮನಸಿಗೆ ರುಚಿಸುವಂತಿವೆ. ಕೆಲವು ಕವನಗಳು ಅಲ್ಲಲ್ಲಿ ವಿಚಾರಗಳಿಗೆ ಮನಸ್ಸನ್ನು ತೊಡಗಿಸುವಂತೆ ಮಾಡುತ್ತವೆ. ಕೆಲವು ಕವನಗಳು ಓದುಗನ ಮನದಲ್ಲಿ ಹುದುಗಿರುವ ಅನುಭವದ ಪ್ರತಿರೂಪವೇ ಎನಿಸಿ ಓದುಗರಿಗೆ ಆಪ್ತವಾಗಿಬಿಡುತ್ತವೆ.ತನ್ನ ಕಾಯಕ ಕ್ಷೇತ್ರದ ಇಕೋ ಟೂರಿಸಂ, ರೆಸಾರ್ಟ್‌ಗಳನ್ನು ವಿನೂತನ ಶಿಲ್ಪ ಕಲಾಕೃತಿಯಾಗಿಸಿದ್ದು, ಅಲ್ಲೆಲ್ಲಾ ಪೂರಕವಾಗಿ ತನ್ನದೆ ಕವನಗಳಿಂದ ಅಲಂಕರಿಸಿರುವುದು, ಭೇಟಿ ನೀಡುವ ಪ್ರವಾಸಿಗರಿಗೆ ರಸದೌತಣವೆ ಸರಿ, ತನ್ನ ಕಾಯಕ ಕೃಷಿಯ ಜೊತೆಜೊತೆಗೆ ಕಾವ್ಯಕೃಷಿಯ ಯಾನ ಹೀಗೆ ನಿರಂತರವಾಗಿ ಅರಳುತ್ತಾ ಸಾಗಲೆಂದು ಹಾರೈಸುವೆ ಎಂದಿದ್ದಾರೆ.

Related Books