ಮುತ್ತುಗ

Author : ಶಶಿ ಸಂಪಳ್ಳಿ

Pages 96

₹ 90.00




Year of Publication: 2018
Published by: ನಿವೇದಿತ ಪ್ರಕಾಶನ
Address: ನಂ.3437 , 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತೀ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
Phone: 9448733323

Synopsys

’ನಿಸ್ತೇಜ ಬಯಲ ಹಾಡು’ ಎಂಬ ಅಡಿಶೀರ್ಷಿಕೆಯಿಂದ ಗಮನ ಸೆಳೆಯುವ ’ಮುತ್ತುಗ’ ಕವಿ ಶಶಿ ಸಂಪಳ್ಳಿ ಅವರು ೨೦೧೮ರಲ್ಲಿ ಪ್ರಕಟಿಸಿದ ಕವನಗಳ ಗುಚ್ಛ. ಅವರ ಹಿಂದಿನ ಕವನ ಸಂಕಲನ ’ಚರಿತ್ರೆಯ ಜಾಡಿನಾಚೆಗೆ’ಯಲ್ಲಿ ಕಂಡುಬರುವ  ಮುಗ್ಧತೆ, ಜೀವಪರತೆ, ಸಿಡಿವ ಗುಣ ಇಲ್ಲಿ ಮತ್ತಷ್ಟು ವಿಸ್ತರಿಸಿಕೊಂಡಿದೆ; ಹೊಸ ಹುರುಪು ಪಡೆದುಕೊಂಡಿದೆ. 


ಇನಿಯಳ ಇನಿದನಿಯ ಜೊತೆಗೆ ವ್ಯವಸ್ಥೆಯ ಕರ್ಕಶ ಸದ್ದನ್ನೂ ಎಚ್ಚರಿಕೆಯಿಂದ ಆಲಿಸುತ್ತಾನೆ ಇಲ್ಲಿಯ ಕವಿ. ಆ ಎಚ್ಚರವೇ  ಅನನ್ಯ ಕಾಳಜಿಯಾಗಿ ರೂಪಾಂತರಗೊಳ್ಳುವುದು ಈ ಸಂಕಲನದ ಶಕ್ತಿ ಕೂಡ. 

’ಎಣ್ಣೆ ಹಚ್ಚಿ ಮಿಂದು ಬಂದ ನಿನ್ನ
ಹೆರಳಲ್ಲಿ ನಲಿದ ಬೆರಳಿಗೆ 
ಅಂದು ಅಂಟಿದ ಗಂಧ’ ಎಂಬಂತಹ ಸುಲಭಕ್ಕೆ ಸೆಳೆವ ಸಾಲ್ಮಿಂಚುಗಳಿಗೂ ಇಲ್ಲಿ ಬರವಿಲ್ಲ.  

About the Author

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ ಅವರು  ಸಾಗರ ತಾಲೂಕಿನ ಪುಟ್ಟ ಸಂಪಳ್ಳಿಯಲ್ಲಿ ಜನಿಸಿದರು. ಕುವೆಂಪು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ.  ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ವಿಜಯ ಕರ್ನಾಟಕ, ಪ್ರಜಾವಾಣಿ , ಕನ್ನಡ ಪ್ರಭ, ದಿ ಸಂಡೆ ಇಂಡಿಯನ್  ಪತ್ರಿಕೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಪರಿಸರ ಅಭಿವೃದ್ಧಿ,  ಗ್ರಾಮೀಣ, ಕೃಷಿ ಹಾಗು ರಾಜಕೀಯ ವಿಶ್ಲೇಷಣೆ ಮೊದಲಾದ ಕ್ಷೇತ್ರಗಳಲ್ಲಿ ಇವರು ಪರಿಣತಿಯನ್ನು ಹೊಂದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ-ಕೃಷಿ ಬಿಕ್ಕಟ್ಟುಗಳು, ಡಾ.ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಕುರಿತು ಲೇಖನಗಳನ್ನು ರಚಿಸಿದ್ದಾರೆ. ಕೆಲವು ಸಾಹಿತ್ಯ ವಿಮರ್ಶನಾ ಲೇಖನಗಳನ್ನ ಕೂಡ ರಚಿಸಿದ್ದಾರೆ. ವನ್ಯ ...

READ MORE

Related Books