ಕೊರೊನಾ ಕಾಲದ ಕವಿತೆಗಳು

Author : ಪ್ರಕಾಶ ಗ. ಖಾಡೆ

Pages 230

₹ 200.00




Year of Publication: 2020
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ- 583201
Phone: 9481042400

Synopsys

ನಾಡಿನ ವಿವಿಧ ಕವಿಗಳು ಕೊರೊನಾ ಕುರಿತ ಬರೆದ 108 ಕವಿತೆಗಳ ಸಂಕಲವವಿದು. ಕವಿ ಪ್ರಕಾಶ್ ಗ. ಖಾಡೆ ಅವರು ಸಂಪಾದಿಸಿದ್ದು , ಕೊರೊನಾ ಕಾಲಘಟ್ಟದಲ್ಲಿ ಬಂದ ಕವಿತೆಗಳಿವು. ಕೃತಿಗೆ ಬೆನ್ನುಡಿ ಬರೆದ ಲೇಖಕ ರಾಗಂ ಅವರು “ಈ ಕೊರೊನಾದ ದುರಿತ ಕಾಲದ ಸಂದರ್ಭದಲ್ಲಿ ಕನ್ನಡದ ಮುಖ್ಯ ಕವಿಗಳೊಂದಿಗೆ ಹೊಸಕಾಲದ ಕವಿಗಳ ಕವಿತೆಗಳನ್ನೊಳಗೊಂಡು ರಚನೆಯಾದ ಈ ಸಂಕಲನವನ್ನು ಸಂಪಾದಿಸಿ ಕೊಟ್ಟಿರುವ ಕವಿ ಡಾ. ಪ್ರಕಾಶ ಗ.ಖಾಡೆ ಅವರು ಮತ್ತು ಯಾಜಿ ಪ್ರಕಾಶನದವರು ಸಾರ್ಥಕ ಕೆಲಸ ಮಾಡಿದ್ದಾರೆ, ಇದು ಕನ್ನಡ ಕಾವ್ಯಲೋಕದಲ್ಲಿ ಬಹುಕಾಲ ಕಾಡುವ ಕಾವ್ಯ ಸಂಪುಟ” ಎಂದು ಶ್ಲಾಘಿಸಿದ್ದಾರೆ

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books