ನೆತ್ತರಾಸಿದ ನೆಲ

Author : ಶಿವಾನಂದ ಕಲಬುರಗಿ

Pages 80

₹ 60.00
Year of Publication: 2020
Published by: ಸಾಹಿತ್ಯ ಸಂಭ್ರಮ ಪ್ರಕಾಶನ
Address: # 88 & 89, 11ನೇ ಅಡ್ಡರಸ್ತೆ, ಜ್ಞಾನಗಂಗಾನಗರ, ಜ್ಞಾನಭಾರತಿ ಅಂಚೆ, ಬೆಂಗಳೂರು-560010.
Phone: 7676985533

Synopsys

ಕವಿ ಶಿವಾನಂದ ಕಲಬುರಗಿ ಅವರ ಕವನಗಳ ಸಂಕಲನ-ನೆತ್ತರಾಸಿದ ನೆಲ. ಬುದ್ಧ-ಬಸವ-ಅಂಬೇಡ್ಕರರ ತತ್ವ ಚಿಂತನೆಗಳನ್ನು ವಸ್ತುವಾಗಿಸಿಕೊಂಡು ರಚಿಸಿದ ಕವಿತೆಗಳು ಮಾತ್ರವಲ್ಲ; ನಿಸರ್ಗ ಪ್ರೀತಿಯ, ಮಾನವೀಯ ಮೌಲ್ಯ ಸಮರ್ಥನೆಯ, ಬದುಕಿನ ಸಾರ್ಥಕತೆಯ ಸೊಬಗುಗಳು ಕವಿತೆಗಳ ಆಕರ್ಷಣೆಯಾಗಿವೆ.  ನಾನೊಂದು ಕಲ್ಲ, ಕಣ್ಣಿಲ್ಲದ ದೇವರು, ಕಲ್ಲು ದೇವರಲ್ಲ ಕವಿತೆಯ ಶೀರ್ಷಿಕೆಗಳೇ ಪ್ರಖರವಾದ ವೈಚಾರಿಕತೆಯನ್ನು ಪ್ರತಿಪಾದಿಸುತ್ತವೆ. ಜಾತಿ ವ್ಯವಸ್ಥೆ, ಸ್ತ್ರೀ ಶೋಷಣೆ ವಿರುದ್ಧದ ಕವಿತೆಗಳೂ ಇವೆ. ಸಾಹಿತಿ ಕುಮಾರ ಇಂದ್ರಬೆಟ್ಟ ಅವರು ಕೃತಿಗೆ ಬೆನ್ನುಡಿ ಬರೆದು ‘ರೂಪಕಗಳ ಅಬ್ಬರವಿಲ್ಲದಿದ್ದರೂ ನವಿರಾದ ಭಾಷಾ ಲಯಗಳನ್ನು ಕಾವ್ಯಾಭಿವ್ಯಕ್ತಿಗೆ ಕವಿಗಳು ಬಳಸಿಕೊಂಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶಿವಾನಂದ ಕಲಬುರಗಿ
(01 May 1982)

ಶಿವಾನಂದ ಕಲಬುರಗಿ ಕನ್ನಡ ಉಪನ್ಯಾಸಕರು. ಯಾದಗಿರಿ ಜಿಲ್ಲೆಯ ಯಾದಗಿರಿಯಲ್ಲಿ ಪದವಿಯವರೆಗೂ ಶಿಕ್ಷಣ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಬಿ.ಇಡಿ ಪೂರ್ಣಗೊಳಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಡೆದಿದ್ದು, ಸದ್ಯ, ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  `ಕಾವ್ಯಪ್ರಿಯ ಶಿವು' ಎಂಬುದು ಇವರ ಕಾವ್ಯನಾಮ.  ಕೃತಿಗಳು: ಹಲವು ನುಡಿಗಳ ನಡಿಗೆ (ವಿಮರ್ಶೆ ಕೃತಿ),  ಅಂತರಂಗ (ಕವನ ಸಂಕಲನ),  ನೆತ್ತರಾಸಿದ ನೆಲ (ಕವನ ಸಂಕಲನ), ಬೆಂದ ಬೇರು ನೊಂದ ಚಿಗುರು( ಕವನ ಸಂಕಲನ), ಹಸಿವು ತಣಿಸಿದವಳು( ಕಥಾ ಸಂಕಲನ), ಸಾಹಿತ್ಯ ಚೇತನ (ವಿಮರ್ಶೆ ಕೃತಿ), ಯುಜಿಸಿ ನಡೆಸುವ ಎನ್ ಇ.ಟಿ. ಪರೀಕ್ಷೆಗಳ ಪ್ರಶ್ನೋತ್ತರ ಕೋಶ-2021, ಕನ್ನಡ ಸಾಹಿತ್ಯ ಪ್ರಶ್ನೋತ್ತರ ಕೋಶ-2021,  ...

READ MORE

Related Books