ಯಾವುದೂ ಈ ಮೊದಲಿನಂತಿಲ್ಲ

Author : ದೀಕ್ಷಿತ್ ನಾಯರ್

Pages 82

₹ 110.00
Year of Publication: 2023
Published by: ಯುವ ವಾಗ್ಮಿಗಳ ಬಳಗ
Address: \"ತವರು\" ನಿಲಯ, ಅನ್ನಪೂರ್ಣೇಶ್ವರಿ ನಗರ, ಹೊಸ ಬಡಾವಣೆ,12ನೇ ತಿರುವು ಪುಷ್ಪ ಪಾಂಡುರಂಗ ಕಲ್ಯಾಣ ಮಂಟಪದ ಹತ್ತಿರ, ಮಂಡ್ಯ-571401
Phone: 7406854007

Synopsys

‘ಯಾವುದೂ ಈ ಮೊದಲಿನಂತಿಲ್ಲ’ ಕೃತಿಯು ದೀಕ್ಷಿತ್ ನಾಯರ್ ಅವರ ಕವನಸಂಕಲನವಾಗಿದೆ. ಈ ಕೃತಿಯ ಕುರಿತು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹೀಗೆ ಹೇಳಿದ್ದಾರೆ; ಕವಿ ದೀಕ್ಷಿತ್ ಗೆ ದಕ್ಕಿದ ಮೀನುಗಳಂತಹ ಕವಿತೆಗಳು ಈ ಸಂಕಲನದಲ್ಲಿವೆ. ಈ ರಚನೆಗಳನ್ನು ಸ್ಥೂಲವಾಗಿ ಗದ್ಯಗಂಧಿ ಪದ್ಯಗಳೆಂದು ಹೇಳಬಹುದು. ಅಂದರೆ ಒಂದು ರೀತಿಯಲ್ಲಿ ಕವಿತೆಯ ಶಿಲ್ಪಕ್ಕೆ ಅಷ್ಟಾಗಿ ಪ್ರಾಮುಖ್ಯ ನೀಡದ, ಭಾವ ಪ್ರಕಟಣೆಗೇ ಹೆಚ್ಚು ಒತ್ತು ಕೊಟ್ಟ ರಚನೆಗಳೆನ್ನಬಹುದು. ದೀಕ್ಷಿತ್ ಅವರ ಈ ಭಾವಲೋಕದಲ್ಲಿ, ಆಪ್ತ ಪಿಸು ನುಡಿಗಳಿವೆ. ಸಿಟ್ಟು ಆಕ್ರೋಶವಿದೆ, ಚಿಂತನೆಯ ಝಲಕುಗಳಿವೆ, ನೋವಿದೆ, ನಿರಾಶೆಯಿದೆ, ಹಾಗೆಯೇ ಕವಿಯ ಆಪ್ತಲೋಕದ ಅನಾವರಣವಿದೆ. ಹೊಸತನಕ್ಕಾಗಿ, ಹೊಸ ಬದುಕಿಗಾಗಿ ತುಡಿತವಿದೆ. ಇವೆಲ್ಲವೂ ಯಾವುದೇ ಆಡಂಬರವಿಲ್ಲದೆ ಅಭಿವ್ಯಕ್ತಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದಿದ್ದಾರೆ. ಇನ್ನು ಈ ಕವನಸಂಕನದಲ್ಲಿರುವ ಉತ್ತಮ ಕವಿತೆಗಳೆಂದರೆ “ಪಾಲಿಶ್ ಮಾಡುತ್ತೇನೆ”, “ಪುಸ್ತಕವನ್ನು ನನ್ನಿಂದ ದೂರವಿಡಬೇಡಿ, “ಯಾವುದೂ ಈ ಮೊದಲಿನಂತಿಲ್ಲ” ಮೊದಲಾದ ಕವಿತೆಗಳು ಬಹಳ ಇಷ್ಟವಾಗುತ್ತವೆ.

About the Author

ದೀಕ್ಷಿತ್ ನಾಯರ್

ಲೇಖಕ ದೀಕ್ಷಿತ್ ನಾಯರ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ತಾಯಿ ರಾಧಾಮಣಿ ಮತ್ತು ತಂದೆ ಕೇಶವ ಮುರಳಿ. ಜನವರಿ 12 2001 ಜನನ. ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದ ಇವರು ಇದೀಗ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಭಾಷಣ, ಚರ್ಚೆ, ನಿರೂಪಣೆ ಮತ್ತು ಉಪನ್ಯಾಸಗಳಲ್ಲಿ ಆಸಕ್ತಿಯನ್ನು ಹೊಂದಿರುವ ದೀಕ್ಷಿತ್ ನಾಯರ್ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯದಲ್ಲೂ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ನಿರಂತರ ...

READ MORE

Related Books