ಗರ್ಭಗುಡಿಯ ಶಿಶು ಚೇತನ

Author : ಪರಿಮಳಾ ರಾವ್ ಜಿ.ಆರ್

Pages 20

₹ 48.00




Year of Publication: 2006
Published by: ಸಿವಿಜಿ ಇಂಡಿಯಾ
Address: ಕಸ್ತೂರ್ ಬಾ ಭವನ, ಗಾಂಧಿಭವನ ಆವರಣ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001

Synopsys

‘ಗರ್ಭಗುಡಿಯ ಶಿಶು ಚೇತನ’ ಕೃತಿಯು ಜಿ. ಆರ್. ಪರಿಮಳಾರಾವ್ ಅವರ ಕವನಸಂಕಲನವಾಗಿದೆ. ಸಾಹಿತಿ ಗೋಪಾಲಕೃಷ್ಣ ರಾವ್ ಅವರು ಮುನ್ನುಡಿ ಬರೆದು ‘ಈ ಕವನ ಸಂಕಲನದಲ್ಲಿ ಕವಯತ್ರಿ, ಕೂಸು ತಾಯಿಯ ಗರ್ಭದಲ್ಲಿ ನವಮಾಸ ಇದ್ದಾಗ, ಬೆಳೆಯುವ ಆ ಕೂಸಿನ ಕಲ್ಪನೆ ಹಾಗೂ ಮಾತೆಯ ಮಮತೆಯ ಲಯ ಭಾವನೆಗಳನ್ನು ತುಂಬಾ ಅಪ್ಯಾಯಮಾನವಾಗಿ ವರ್ಣಿಸಿದ್ದಾರೆ. ಓದುಗರನ್ನು ಅಚ್ಚರಿಗೊಳಿಸುವಂಥ ಮತ್ತೊಂದು ಅಂಶವೆಂದರೆ, ಇವರ ಕವನಗಳಲ್ಲಿ ಕಂಡು ಬರುವ ಸರಳ ಪದ ಲಾಲಿತ್ಯ. ಪದಗಳ ಆಯ್ಕೆ ಕೇವಲ ಪ್ರಾಸಕ್ಕಾಗಿ ಅಥವಾ ಚಮತ್ಕಾರ ಇಲ್ಲವೇ ಜಾಣ್ಮೆ ತೋರಲೆಂದೋ, ಪ್ರೌಢಿಮೆ ಪ್ರದರ್ಶಿಸಲೆಂದೋ ಆಯ್ದ ಪದಗಳಲ್ಲ ಇವು. ಗಿಡದಲ್ಲಿ ಹೂವು ಅರಳಿದಂತೆ , ತೀರ ಸಹಜವಾಗಿ ಮೂಡಿ ಬಂದ ಪದಗಳು ಇಲ್ಲಿ ಸೃಷ್ಟಿಯ ಸೊಬಗಿನ ಸುಂದರ ಚಿತ್ರಣವನ್ನು ನೀಡಿದ್ದಾರೆ. ಉಕ್ಕಿ ಬರುವ ಭಾವನೆಗಳನ್ನು ಹದವರಿತ ನಿಕೃಷ್ಟ ನುಡಿಗಳಲ್ಲಿ ಅಂಕೆಯಲ್ಲಿಟ್ಟು ವ್ಯಕ್ತಪಡಿಸುವುದೇ ಅವರ ಕವನದ ಲಕ್ಷಣ. ಅದು ಇಲ್ಲಿ ನಡೆದಿದೆ’  ಎಂದು ಪ್ರಶಂಸಿಸಿದ್ದಾರೆ. 

About the Author

ಪರಿಮಳಾ ರಾವ್ ಜಿ.ಆರ್
(06 January 1941)

ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ.  ...

READ MORE

Related Books