ಅಪಚಾರವೆಸಗದ ಅನುಭವಗಳು

Author : ಮಮತಾ ಆರ್‌.

Pages 84

₹ 75.00
Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲೇಖಕಿ ಮಮತಾ ಆರ್‍ ಬರೆದಿರುವ ’ಅಪಚಾರವೆಸಗಿದ ಅನುಭವಗಳು’ ಕೃತಿಯಲ್ಲಿ ಒಟ್ಟು 42 ಕವಿತೆಗಳ ಸಂಗ್ರಹವಿದೆ.

ಮನುಷ್ಯ ಜೀವಿಯೇ ಸೃಷ್ಟಿಸಿಕೊಂಡ ಕೆಲವು ಸಂಕೀರ್ಣತೆಗಳ ಗೋಳು -ಧೂಳು, ಸದ್ದು-ಗದ್ದಲಗಳಲ್ಲಿ ಕೆಲ ಕ್ಷಣಗಳನ್ನು, ತಲ್ಲಣಗಳನ್ನು ಕಸಿದುಕೊಳ್ಳುವ ಕೆಲವು ಕಾವ್ಯಧ್ವನಿಯು ’ಅಪಚಾರವೆಸಗಿದ ಅನುಭವಗಳು’ ಕೃತಿಯಲ್ಲಿ ಮನಗಾಣಬಹುದು.

ಹೀಗೊಂದು ಪತ್ರ, ನಿರಾಕರಿಸಲ್ಪಟ್ಟ ಮೋಕ್ಷ, ದೇವರು, ದಾರಿಹೋಕ, ಭಾಷೆ ಸತ್ತಾಗ, ಚಿಲ್ಲರೆ, ನರಕದ ಯಾತ್ರಿ, ನನ್ನ ಪ್ರಿಯ ಕವಿಗಳು, ಸಾವು, ಅನುವಾದ ಮುಂತಾದ ಕವಿತೆಗಳು ಪ್ರಮುಖವಾಗಿವೆ.

 

About the Author

ಮಮತಾ ಆರ್‌.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನವರಾದ ಮಮತಾ ಆರ್‌. ಅವರ ಮನೆ ಮಾತು ಕೊಂಕಣಿ, ಸಿದ್ದಾಪುರದಲ್ಲಿ ಪದವಿ ಶಿಕ್ಷಣ, ಆಂಗ್ಲಭಾಷೆ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿ ಪ್ರಸ್ತುತ ಬೆಂಗಳೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಹಾಗೂ ಸಿನೆಮಾ ಆಸಕ್ತಿಯ ಕ್ಷೇತ್ರಗಳು. ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಹೊಸದಿಗಂತ ಆಯೋಜಿಸಿದ ಕಥಾ ಸ್ಪರ್ಧೆಗಳಲ್ಲಿ ಬಹುಮಾನ. “ನಿಷೇಧಿತ ಹಾಡುಗಳು' ಗಝಲ್ ಸಂಕಲನ - ಕನ್ನಡ ಪುಸ್ತಕ ಪ್ರಾಧಿಕಾರದಿಂದ ...

READ MORE

Related Books