ಎರಡು ಮುಖ

Author : ರಘುಶಂಖ ಭಾತಂಬ್ರಾ

Pages 40

₹ 10.00




Year of Publication: 1991
Published by: ಗೆಳೆಯರ ಬಳಗ, ಭಾತಂಬ್ರಾ
Address: ಗೆಳೆಯರ ಬಳಗ, ಭಾತಂಬ್ರಾ-585411
Phone: 9916424411; 7676109609

Synopsys

ರಘುಶಂಖ ಭಾತಂಬ್ರಾ ಅವರು ಯೌವನದ ಹೊಸ್ತಿಲಲ್ಲಿ ಬರೆದ ಕವನಗಳ ಗುಚ್ಛ ಇದು. ಎಳೆಯ ಕವಿಗಳ ಆಕರ್ಷಣೆಯ ಕಾವ್ಯವಸ್ತುಗಳಲ್ಲಿ ಒಂದಾದ ಪ್ರಕೃತಿ ಇಲ್ಲಿ ಪ್ರಧಾನ ಧಾರೆಯಾಗಿದೆ. 

ಕವಿಯ ಅಜ್ಜಿ ಚೆನ್ನವ್ವ ಪಾತ್ರೆ ಬೀಸುವಾಗ, ಕುಟ್ಟುವಾಗ, ಕಳೆ ಕೀಳುವಾಗ, ಸಾಂಸ್ಕೃತಿಕ ಸಭೆ-ಸಮಾರಂಭ, ಭಜನೆ ಮೇಳದಲ್ಲಿ ಹಾಡುತ್ತಿದ್ದ ಹಾಡುಗಳೇ ಪ್ರೇರಣೆ ಎಂದು ಸ್ವತಃ ಕವಿ ಹೇಳಿಕೊಂಡಿದ್ದಾರೆ. 

ಐವತ್ತೈದು ಕವಿತೆಗಳಿರುವ ಈ ಸಂಕಲನ ಕವಿಯೊಬ್ಬನ ಆರಂಭಿಕ ಕವಿತೆಗಳು ಹೇಗಿರುತ್ತವೆ ಎಂಬುದಕ್ಕೂ ಉದಾಹರಣೆ. 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books