ನೀರಾಗ ನಿಂತೀನಿ ನೀರಡಿಸಿ

Author : ಎಂ.ಎಂ. ಕಲಬುರ್ಗಿ

Pages 90

₹ 70.00
Year of Publication: 2017
Published by: ಸಂವಹನ ಪ್ರಕಾಶನ
Address: ಮೈಸೂರು

Synopsys

ಇದು ಎಂ.ಎಂ. ಕಲಬುರ್ಗಿ ಅವರ ಎರಡನೇ ಕವಿತಾ ಸಂಕಲನ. ಕಲಬುರ್ಗಿ ಅವರು ಹತ್ಯೆಗೊಳಗಾದ ನಂತರ ಪ್ರಕಟವಾದ ಕೃತಿ ಇದು. ಓದುಗರಿಗೆ ಮುದ ನೀಡುವಂತಹ ನಲವತ್ತೆರಡು ಕವಿತೆಗಳು ಇಲ್ಲಿವೆ.

ಸಂಕಲನದ ಕವಿತೆಗಳ ಬಗ್ಗೆ ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು 

ಸತ್ಯದ ಕಲ್ಲುಮುಳ್ಳಿನ ಮಾರ್ಗದಲ್ಲಿ ಸಾಗಿ ಬಂದ ಕಲಬುರ್ಗಿಯವರು 1997ರಲ್ಲಿ ಪ್ರಕಟಿಸಿದ ಮೊದಲ ಕಾವ್ಯಕೃತಿ 'ನೀರು ನೀರಡಿಸಿತ್ತು. ಆ ನಂತರ ರಚಿಸಿದ ಮತ್ತು ತಾರುಣ್ಯದ ದಿನಗಳಲ್ಲಿ ಬರೆದಿದ್ದ ಕವಿತೆಗಳನ್ನು ಸಂಕಲಿಸಿ 'ನೀರಾಗ ನಿಂತೀನಿ ನೀರಡಿಸಿ' ಪ್ರಕಟಣೆಗೆ ಅಣಿಗೊಳಿಸಿದ್ದರು. ಅದು ಹೊರಬರುವ ಮೊದಲೇ 2015ರಲ್ಲಿ 'ಸತ್ಯವೆಂಬ ಕೂರಲಗನೇ ಹಿಡಿದು ಓಡುತ್ತಲಿದ್ದೇನೆ... ದಾರಿ ಬಿಡಿ' ಎಂದು ಹಾಡುತ್ತ ದೇವಸಭೆಗೆ ನಡೆದರು. ಇಲ್ಲಿಯ ಕವಿತೆಗಳಲ್ಲಿ ಪುಟಿಯುತ್ತಿರುವ ಜಲಮೋಹ ನೀರೊಳಗಿದ್ದರೂ ಬೆಮರುವ ದುರ್ಯೋಧನ ಹಿಂಜರಿತವಲ್ಲ, ನೀರಿಗಿಳಿದು ಎದೆ ತುಂಬಿ ದಾಹ ತೀರಿಸಿಕೊಳ್ಳುವ ಬಸವಣ್ಣನ ಛಲಗಾರಿಕೆಯಾಗಿದೆ. ಇದು ಕಲಬುರ್ಗಿಯ ಕಾವ್ಯಪ್ರಜ್ಞೆಗೆ ಮೂಡಿದ ಹೆಮ್ಮೆಯ ಗರಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books