ಕೌದಿ

Author : ಕಲ್ಮೇಶ ತೋಟದ

Pages 86

₹ 85.00
Year of Publication: 2019
Published by: ಕಸ್ತೂರಿ ಪ್ರಕಾಶನ
Address: ಇನಾಮತಿ ಓಣಿ, ಕುಸುಗಲ್ ಗ್ರಾಮ, ಹುಬ್ಬಳ್ಳಿ ತಾಲೂಕು, ಧಾರವಾಡ- 580023

Synopsys

‘ಕೌದಿ’ ಕಲ್ಮೇಶ ತೋಟದ ಅವರ ಪ್ರಥಮ ಕವನ ಸಂಕಲನ. ಈ ಪುಸ್ತಕಕ್ಕೆ ಹಿರಿಯ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯಲ್ಲಿ ಅರವತೈದು ಕವಿತೆಗಳಿವೆ. ಬಾಲ್ಯದ ನೆನಪುಗಳಿಂದ ಪ್ರಾರಂಭವಾಗುವ ಇವರ ಕವಿತಾ ಸರಣಿ ತನ್ನ ತಾರುಣ್ಯ, ತನ್ನ ಗೆಳೆಯರು, ಊರು ನಂತರರ ಸಮಾಜ ಮತ್ತು ಸಾಂಸ್ಕೃತಿಕ ಸಂದರ್ಭಗಳ ಮುಖ್ಯ ಪ್ರವಾಹದಲ್ಲಿ ತೇಲುವ ಹೂಗಳಂತಿರುವ ಗೆಳತಿಯರಿಗಾಗಿ ಹಂಬಲಿಸಿ ಬರೆದ ಕವಿತೆಗಳು ಇಲ್ಲಿವೆ. ಹೀಗೆ ವೈಯಕ್ತಿಕ, ಪಾರಿಸರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿಯ ಅನುಭವಗಳನ್ನು ಜೋಡಿಸಿಕೊಂಡ್ದರಿಂದ ಇದೊಂದು ಸುಂದರ ಕೌದಿಯಂತೆ ಭಾಸವಾಗುತ್ತದೆ ಎನ್ನುತ್ತಾರೆ ಮಾಲತಿ ಪಟ್ಟಣಶೆಟ್ಟಿ.

ಎರಡು ಮೂರು ಕವಿತೆಗಳನ್ನು ಬಿಟ್ಟರೆ ಉಳಿದೆಲ್ಲವೂ ಚಿಕ್ಕ-ಚಿಕ್ಕ ಚೌಪದಿಗಳೆ. ಪ್ರಾಸದ ಗೊಡವೆ ಇಲ್ಲಿಲ್ಲ. ಹೊಸ ಪದಗಳ ಪ್ರಯೋಗವಿಲ್ಲ ಮತ್ತು ಉಪಮೆ-ರೂಪಕಗಳು ಅಲ್ಲಲ್ಲಿ ಕಾಣಬರುತ್ತವೆ. ಆದರೆ ಸರಳ, ನಿರರ್ಗಳ ಭಾಷೆಯು ನಿಲ್ಲದ ಹಳ್ಳದಂತೆ ಸರಾಗವಾಗಿ ಸಾಗುತ್ತದೆ ಎಂಬುದು ಮಾಲತಿ ಅವರ ಅಭಿಪ್ರಾಯ. ಈಗಷ್ಟೇ ಕನ್ನಡ ಕಾವ್ಯ ಲೋಕಕ್ಕೆ ಕಾಲಿಡುತ್ತಿರುವ ಕಲ್ಮೇಶ ತೋಟದ ಅವರು ಕನ್ನಡ ಸಾಹಿತ್ಯ ಲೋಕದ ಭರವಸೆಯ ಕವಿಯಾಗುವ ಎಲ್ಲಾ ಸೂಚನೆಗಳು ಅವರ ಮೊದಲ ಕೃತಿಯಲ್ಲೇ ಇವೆ. 

About the Author

ಕಲ್ಮೇಶ ತೋಟದ
(14 August 1994)

ಕಲ್ಮೇಶ ತೋಟದ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮದವರು. ತಂದೆ- ಹನಮಂತಪ್ಪ ತೋಟದ, ತಾಯಿ- ಕಸ್ತೂರಿ ತೋಟದ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಸುಗಲ್ಲದಲ್ಲಿಯೇ ಪೂರೈಸಿ, ಆನಂತರ ಹುಬ್ಬಳ್ಳಿಯ ಶ್ರೀಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಪ್ರಜಾವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದಾರೆ. ...

READ MORE

Related Books