ವಿಧಾನಸಭೆಯಲ್ಲೊಂದು ಹಕ್ಕಿ

Author : ಎಸ್. ದಿವಾಕರ್‌

Pages 72

₹ 70.00




Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 08026617100

Synopsys

‘ವಿಧಾನಸಭೆಯಲ್ಲೊಂದು ಹಕ್ಕಿ’ ಲೇಖಕ ಎಸ್.ದಿವಾಕರ್ ಅವರ ಕವನ ಸಂಕಲನ. ಈ ಕೃತಿಗೆ ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಬೆನ್ನುಡಿ ಬರೆದು ‘ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು, ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ, ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ, ಅವರ ಅನುವಾದಗಳಂತೆ ಅವರ ಕಾವ್ಯವೂ ನಮ್ಮ ಕಾಲವು ಕಂಡ ಹಿಂಸೆಯ ಬಗ್ಗೆ ಇದೆ. ಈ ಸಂಕಲನದ ಅನೇಕ ಮುಖ್ಯ ಪದ್ಯಗಳು ಈ ಹಿಂಸೆಯನ್ನು ವ್ಯಾಖ್ಯಾನಿಸುತ್ತವೆ’ ಎನ್ನುತ್ತಾರೆ.

ಇಲ್ಲಿ ಏನರ್ಥವಿದಕೆಲ್ಲ, ಪ್ರೊಕ್ರೊಸ್ಟೆಸ್ ಮಂಚ, ಫಲಾನುಭವಿಗಳು, ಒಂದು ನಿಟ್ಟುಸಿರು, ಪ್ರಾಸ, ತಾಲೀಮು, ವಿಧಾನಸಭೆಯಲ್ಲೊಂದು ಹಕ್ಕಿ, ಬಿಡುಗಡೆ, ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು, ಪೇಂಟಿಂಗು, ಕೋ, ಏನು ಮಾಡಬಲ್ಲೇ?, ನಿರಾಶೆ ತೂಗುಬಿದ್ದಿದೆ, ಪ್ರತಿಮೆಗಳು, ನಗಬೇಕು ಹೇಗೆ, ಯಾರೋ ಬಡೀತಿದ್ದಾರೆ ಹುಡುಗಿಯನ್ನು, ಕವನವೆನ್ನುವುದೇನು, ಇಂದು ನಮ್ಮೀ ನಾಡು, ಎಲೆ, ಕೊಲ್ಲುವ ದಿನ, ಕೋಳಿ, ಕರ್ಮಣಿ ಪ್ರಯೋಗ, ತೆರೆದುಬಿಡು ಪುಸ್ತಕವ, ಕೊಳಲು, ರೂಪಕ, ಒಂದು ಪುಟ್ಟ ನಗು, ಭೀಮಸೇನಗಾನ, ಪೂರ್ವ-ಪಶ್ಚಿಮ ಸರಹದ್ದು, ಸತ್ತವರು ಸ್ವಾರ್ಥಿಗಳು, ದೇವಾಲಯ-ವಧಾವಲಯ, ಹಲ್ಲಿ, ಪಂ. ಪರಮೇಶ್ವರ ಹೆಗಡೆಯವರ ಮಾರವಾ, ನೆರಳು ಕವಿತೆಯೆಂದರೆ, ಹಾಗೂ ಚಿತ್ರಹಿಂಸೆ ಎಂಬ 35 ಕವನಗಳು ಸಂಲಕನಗೊಂಡಿವೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books