ಎಲೆಯೆಂಬುದು ಗಾಳಿಯ ಅಧೀನ

Author : ಪಿ. ಚಂದ್ರಿಕಾ

Pages 172

₹ 200.00
Year of Publication: 2017
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಲೇಖಕಿ, ಪಿ ಚಂದ್ರಿಕಾ ಅವರ 111 ಕವಿತೆಗಳ ಸಂಗ್ರಹ ಈ ಪುಸ್ತಕ. ಹಲವು ವಾರ ಪತ್ರಿಕೆ, ಮಾಸ ಪತ್ರಿಕೆ ಹಾಗೂ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಹಾಗೂ ಇತರೆ ಕವಿತೆಗಳ ಸಂಕಲವನ್ನು ’ಎಲೆಯೆಂಬುದು ಗಾಳಿಯ ಅಧೀನ’ ಎಂಬ ಪುಸ್ತಕದ ಮೂಲಕ ಹೊರ ತಂದಿದ್ದಾರೆ. 

ಸ್ತ್ರೀ ಲೋಕದ ಸ್ವಯಾನುಭವವನ್ನು ಕವಿತೆಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿರುವ ಚಂದ್ರಿಕಾ ಅವರು, ಎಲ್ಲೂ ಪುರುಷ ಮತ್ತು ಸ್ತ್ರೀಗಳ ನಡುವೆ ಅಪವಾದವನ್ನು ಹುಡುಕುವ ತಪ್ಪನ್ನು ಮಾಡಿಲ್ಲ. ಸ್ತ್ರೀ ಸಂವೇದನೆ ಎಂದರೇನು ಎನ್ನುವುದನ್ನು ಈ ಕವಿತೆಗಳು ಜಗತ್ತಿಗೆ ಸಾರುತ್ತವೆ. ಈ ಕಾರಣಕ್ಕಾಗಿ ಪ್ರಸ್ತುತ ಸಂಕಲನವು ಕೇವಲ ಗಾಳಿ ಗಂಟಲಿನ ಕಾವ್ಯವಾಗದೆ, ಎಲ್ಲರಿಗೂ ಆಪ್ತವಾಗುವ ಕಾವ್ಯವಾಗಿ ನಿರೂಪಿಸಲ್ಪಟ್ಟದೆ.

ಈ ಸಂಕಲನದಲ್ಲಿ ಅನುಭವದ ವಿವಧತೆ ಇದೆ, ಹಲವು ಭಾವಗಳ ಮಿಳಿತವಿದೆ, ಭಾವನೆಗಳ ಆರ್ದ್ರತೆಯಿದೆ, ಸಂವೇದನಾಶೀಲ ಮಿಡಿತಗಳು ಪುಸ್ತಕದ ಪುಟಗಳಲ್ಲಿ ಹಾಸು ಹೊಕ್ಕಾಗಿದೆ. ಸೆಳವು, ವೈರುಧ್ಯ, ವ್ಯಾಖ್ಯಾನ, ಹಕ್ಕು, ಬೇವಾರಿಸ್, ಗುರು, ಸೂತ್ರ, ತೀವ್ರತೆ ಮತ್ತಿತರ ಕವಿತೆಗಳು ಓದುಗರನ್ನು ಪುಸ್ತಕದೆಡೆಗೆ ಸೆಳೆಯುತ್ತವೆ.

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Conversation

Related Books