ಕಾವೇರಿಯಿಂದ ಕಡಲಿನವರೆಗೆ

Author : ಪಿ.ಎಸ್. ರಾಮಾನುಜಂ

Pages 49

₹ 20.00




Year of Publication: 1997
Published by: ಶ್ರೀಪ್ರೇಮಸಾಯಿ ಪ್ರಕಾಶನ
Address: ಶ್ರೀಗುರುಪ್ರಸಾದ, 845, 4ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-560040

Synopsys

‘ಕಾವೇರಿಯಿಂದ ಕಡಲಿನವರೆಗೆ’ ಪಿ.ಎಸ್.ರಾಮಾನುಜಂ ಅವರ ಕವನ ಸಂಕಲನ. 30 ಕವನಗಳಿವೆ. ಕವಿಯ ಮನಸ್ಸು ಕಾವೇರಿಯಿಂದ ಕಡಲಿನವರೆಗೆ ಭಾವಪ್ರಯಾಣ ಮಾಡುತ್ತದೆ. ಕಾವೇರಿ ಹಾಗೂ ಕಡಲು ಇಲ್ಲಿ ಪ್ರತೀಕಗಳಾಗಿ ನಿಂತು ಪ್ರಜ್ಞಾಪ್ರಯಾಣದ ವಿಸ್ತಾರವನ್ನು ಸೂಚಿಸುತ್ತದೆ. ಕವಿಯ ಮನಸ್ಸು ಆಸೆ, ನಿರಾಸೆ, ಉತ್ಸಾಹ, ಅಪೇಕ್ಷೆ, ಉಪೇಕ್ಷೆ ಮುಂತಾದ ಸಂಚಾರಿ ಭಾವಗಳ ಮೂಲಕ ನಡೆದು ವಿಡಂಬನೆಯಲ್ಲಿ ಹಾದು, ನಮ್ಮ ಸುತ್ತ ನೋಡುವ ವೈರುಧ್ಯಗಳನ್ನೂ ಸಮಸ್ಯೆಗಳನ್ನೂ ನೋಡುತ್ತಾ, ಜೀವನದ ಪಂಥಾಹ್ವಾನಗಳನ್ನು ಎದುರಿಸಿ ನಿಲ್ಲುವ ಸಂಕಲ್ಪದಲ್ಲಿ ಪರ್ಯಾವಸಾನ ಹೊಂದುತ್ತದೆ. ಆರೋಹಣ ಸಂಕಲ್ಪಗಳ ನಡುವಣ ಪ್ರಜ್ಞಾಪ್ರಯಾಣ ಸಂಕಲನದ ಮುಖ್ಯ ಸ್ವರೂಪವಾಗಿದೆ.

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books