ಧರಣಿ ಬೆಳಗಿದ ದೇವತೆ

Author : ತಿಮ್ಮಯ್ಯಶೆಟ್ಟಿ ಇಲ್ಲೂರು

Pages 88

₹ 80.00
Year of Publication: 2019
Published by: ವೈಷ್ಣವಿ ಪ್ರಕಾಶನ
Address: ಮದರಕಲ್ , ತಾಲೂಕು ದೇವದುರ್ಗ, ಜಿಲ್ಲೆ: ರಾಯಚೂರು

Synopsys

ಧರಣಿ ಬೆಳಗಿದ ದೇವತೆ-ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಅವರ ಕವನ ಸಂಕಲನ. ಕರುಣಿಸೆನೆಗೆ ನಗರೇಶ್ವರ ಎಂಬ ಕವನದಿಂದ ಕೊನೆಯದಾಗಿ ಅನ್ನದಾತ ಎಂಬ ಕವನದವರೆಗೆ ಒಟ್ಟು 70 ಕವನಗಳಿವೆ. ಇವರ ಕಾವ್ಯಾಲೋಕವನ್ನು ದರ್ಶಿಸಿದಾಗ ನಮಗೆ ಕಾಣುವುದು ಅಪ್ಪಟ ಮಾನವತವಾದ. ಕುವೆಂಪುರವರ ಅನಿಕೇತನ ತತ್ವಕ್ಕೆ ಪ್ರತಿಮಾ ಪ್ರಭಾವಳಿಯಂತಿದೆ. ಇವರ ಕಾವ್ಯದ ಸೆಳಕುಗಳು ಹೊಸಭಾವ ಉದಿಸಲಿ, ರಸಋಷಿಗೆ ಮನವಿ ಎಂಬ ಕವಿತೆಗಳಲ್ಲಿ ವೈವಿಧ್ಯತೆಯಲ್ಲಿ ಏಕತೆ ತತ್ವವನ್ನು ಕಾಣುತ್ತೇವೆ. ಮಾನವತವಾದದ ಹಿರಿಮೆ ಗರಿಮೆಗಳನ್ನು ಬಿತ್ತರಿಸುವ ಇವರ ಕವಿತೆಗಳಲ್ಲಿ ಭಾಷೆ ನಿರಾಡಂಬರವನ್ನು ಹೊತ್ತ ಚಂದ್ರಕಾಂತ ಶಿಲೆಯ ಪ್ರತಿಮೆಗಳಂತಿವೆ. ಇವರ ಕವಿತೆಗಳನ್ನು ಭಾವಗೀತೆಗಳೆಂದೇ ಕರೆಯುವದು ಔಚಿತ್ಯಪೂರ್ಣವಾಗಿದೆ ಎಂದು ಮುನ್ನುಡಿಯಲ್ಲಿ ರಾಯಚೂರಿನ ಹಿರಿಯ ಸಾಹಿತಿ ವಿಪ್ರಶ್ರೀ ವಿ.ಎಸ್.ಕಾಂತ ಅವರು ಅಭಿಪ್ರಾಯಪಟ್ಟಿದ್ದಾರೆ.

ನಿತ್ಯ ಲೋಕದ ತಳಮಳ, ಅಸಹಾಯಕತೆ, ಕಮರುತ್ತಿರುವ ಕನಸು, ಮನುಷ್ಯ ಪ್ರೀತಿಯ ಹುಡುಕಾಟ, ಸಾಮಾಜಿಕ ವೈರುಧ್ಯಗಳಿವೆ. ನಿಸರ್ಗದ ಸೊಬಗನ್ನು ಕಂಡು ಕವಿ ಮನಸ್ಸು ಒಂದು ಕಡೆ ಬೀಗಿದರೆ, ಇನ್ನೊಂದು ಅನ್ಯಾಯ, ಅಸಮಾನತೆಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ವ್ಯವಸ್ಥೆಯನ್ನು ಕಂಡು ರೋಸಿ ಹೋಗಿದೆ. ಪ್ರತಿರೋಧವನ್ನು ಒಡ್ಡಿದೆ. ಸೌಹಾರ್ದ ಬದುಕಿಗಾಗಿ ಚಡಪಡಿಸಿದೆ. ಕವಿಗೆ ಬದುಕಿನ ಬಗೆಗೆ ಜೀವ ಪ್ರೀತಿಯ ಮಿಡಿತವಿದೆ ಎನ್ನುವುದು ಸಂಕಲನದ ಹೆಚ್ಚುಗಾರಿಕೆ ಎಂದು ಬೆನ್ನುಡಿಯಲ್ಲಿ ಡಾ. ದಸ್ತಗೀರ್ ಸಾಬ್ ದಿನ್ನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

About the Author

ತಿಮ್ಮಯ್ಯಶೆಟ್ಟಿ ಇಲ್ಲೂರು

ಲೇಖಕ ಡಾ. ತಿಮ್ಮಯ್ಯಶೆಟ್ಟಿ ಇಲ್ಲೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದವರು. ಎಂ.ಎ. (ಇತಿಹಾಸ) ಹಾಗೂ ಎಂ.ಇಡಿ  ಪದವೀಧರರು.  ಶಿಕ್ಷಣ ಶಾಸ್ತ್ರ ವಿಷಯದಲ್ಲಿ ಪಿ.ಹೆಚ್. ಡಿ. ಪದವಿ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿಯ ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪ-ಪ್ರಾಚಾರ್ಯರಾಗಿ ನಂತರ ಸದ್ಯ, ರಾಯಚೂರು ಜಿಲ್ಲೆಯ ಮಾನ್ವಿಯ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ  ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾವ್ಯನಾಮ-ಮದರಕಲ್ಲ ಕಂದ. ಕಾವ್ಯ, ಮಕ್ಕಳ ಕಾವ್ಯ, ನಗರೇಶ್ವರ ಅಂಕಿತದಲ್ಲಿ ಆಧುನಿಕ ವಚನಗಳು, ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತೆ ಆಧಾರಿತ ತ್ರಿಪದಿಗಳು, ಗಜಲ್, ಕಥೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ಇವರ ಹಲವಾರು ...

READ MORE

Related Books