ಹುಡುಕಾಟ (ಕವನ ಸಂಕಲನ)

Author : ವಿಜಯಕುಮಾರ ಜಿ. ಪರುತೆ

Pages 97

₹ 80.00
Year of Publication: 2019
Published by: ಶ್ರೀ ರೇವಣಸಿದ್ಧೇಶ್ವರ ಪ್ರಕಾಶನ
Address: ಜೇವರ್ಗಿ ರಸ್ತೆ, ಕಲಬುರಗಿ.

Synopsys

ಲೇಖಕ ಡಾ.ವಿಜಯಕುಮಾರ ಜಿ ಪರುತೆ ರಚಿಸಿದ ಕವನ ಸಂಕಲನ-ಹುಡುಕಾಟ. ಇಲ್ಲಿ ಒಟ್ಟು 44 ಕವನಗಳು ಹಾಗೂ 27 ಹನಿಗವನಗಳಿವೆ. ಕವಿಯ ಮನೋಧರ್ಮವೇ ಹುಡುಕಾಟ. ಬಾಹ್ಯ ಜಗತ್ತಿನ ಹತ್ತು ಹಲವಾರು ವಿಷಯಗಳನ್ನು ಹುಡುಕಿ ಕೊಂಡು, ತನ್ನ ಕಾವ್ಯ ನಿರ್ಮಿತಿಗೆ ಆಕಾರವಾಗಿ ಇರಿಸಿಕೊಂಡಿರುವುದನ್ನು ಕಾಣಬಹುದು. ವಿಶ್ವಾಸ, ಕಾಯಕ, ಶ್ರದ್ಧೆ, ಜ್ಞಾನ, ವಿದ್ಯೆ, ಶಾಂತಿ, ಸಾಧನೆ ಹೀಗೆ ವಿವಿಧ ಮೌಲ್ಯಗಳನ್ನು ತಮ್ಮ ಪರಿಸರದಲ್ಲಿ ಕವಿ ಕಾನಲು ಆಶಿಸುತ್ತಾನೆ.ಪ್ರಚಲಿತ ವಿದ್ಯಮಾನಗಳು ಬಹುತೇಕ ಕವನಗಳ ವಸ್ತು. ಈ ಕವನ ಸಂಕಲನಕ್ಕೆ ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯು 2018 ನೇ ಸಾಲಿನ `ದೇವಾನಾಂ ಪ್ರಿಯ' ಪ್ರಶಸ್ತಿ ನೀಡಿ ಗೌರವಿಸಿದೆ.

 

About the Author

ವಿಜಯಕುಮಾರ ಜಿ. ಪರುತೆ
(18 May 1963)

ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...

READ MORE

Related Books