ಕಾಲದ ರಶೀದಿ ಪುಟ

Author : ಮಧು ಬಿರಾದಾರ

Pages 80

₹ 80.00




Year of Publication: 2017
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ-577703
Phone: 9449174662

Synopsys

ಕವಿ ಮಧು ಬಿರಾದಾರ ಅವರ ಮೊದಲ ಕವನ ಸಂಕಲನ ’ಕಾಲದ ರಶೀದಿ ಪುಟ’. ಪ್ರೀತಿ, ಸ್ನೇಹ, ಸಾಂಗತ್ಯಗಳ ಜೀವನಸತ್ವವನ್ನು ಲೋಕಪ್ರೀತಿಯನ್ನು ಕಡು ಎಚ್ಚರದಿಂದ ಕಾಪಾಡಿಕೊಳ್ಳಬೇಕೆಂಬ ಅರಿವಿದೆ. ಹೂವು ಹೂವಾಗಲು ರೂಪ, ರಸ, ಗಂಧ, ಬಣ್ಣಗಳ ಬೆರಕೆ ಬೇಕೆಂಬ ಪ್ರಜ್ಞೆಯೇ ಕವಿತೆಯನ್ನು ಕಾಯುವ ಧರ್ಮವಾದ್ದರಿಂದಲೋ ಏನೋ ಇಲ್ಲಿಯ ಕವಿತೆಗಳನ್ನು ಸುಮ್ಮನೆ ಪ್ರೀತಿಸಬೇಕೆನಿಸುತ್ತದೆ. 

’ಜೀವಸ್ಪರ್ಶಕ್ಕೆ ಒದಗಿದ ಅಸಾಮಾನ್ಯ, ಸಾಮಾನ್ಯರ ಕಥನಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ, ಬಾಳ್ವೆಯ ಕುರಿತು ಪಕ್ವವಾದ ಲೋಕದೃಷ್ಟಿಯನ್ನು ರೂಪಿಸಿಕೊಂಡಿದ್ದಕ್ಕಾಗಿ ಇಲ್ಲಿಯ ಹಲವು ಕವಿತೆಗಳು ಆಪ್ತವೆನಿಸುತ್ತವೆ’ ಎನ್ನುತ್ತಾರೆ ಕವಿ ವಿನಯಾ.

 

About the Author

ಮಧು ಬಿರಾದಾರ
(26 August 1989)

ಮಧು ಬಿರಾದಾರ ಅವರು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸುಸಲಾದ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ, "ಜಾಗತಿಕ ಕಾವ್ಯದ ಕನ್ನಡ ಅನುವಾದಗಳು: ತಾತ್ವಿಕ ಅಧ್ಯಯನ " ವಿಷಯ ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಸಂಚಯ‌ ಮತ್ತು ಸಂಕ್ರಮಣ ಕಾವ್ಯ ಬಹುಮಾನ ಹಾಗೂ ಕ್ರೈಸ್ಟ್ ಕಾಲೇಜ್ ದ.ರಾ. ಬೇಂದ್ರೆ ಕವನ ಸ್ಪರ್ಧೆಯಲ್ಲಿ ಆರು ಭಾರಿ ಬಹುಮಾನಿತರು. "‌ಕಾಲದ ರಶೀದಿ ಪುಟ" ಪ್ರಕಟಿತ ಕವನ ಸಂಕಲನ. ಈ ಸಂಕಲನವು ಗುಲ್ಬರ್ಗಾ ವಿಶ್ವವಿದ್ಯಾಲಯ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ...

READ MORE

Related Books