ಪ್ರೀತಿಯ ಪಯಣ

Author : ಸೌಮ್ಯ (ಸೌಮ್ಯಾಮೃತ)

Pages 76

₹ 80.00
Year of Publication: 2018
Published by: ಬೆಳಕು ಪ್ರಕಾಶನ
Address: 4000, ಸಂಪತ್ ನಿಲಯ, 7ನೆಯ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಗಾಯತ್ರಿನಗರ, ಬೆಂಗಳೂರು-21
Phone: 9739777071

Synopsys

’ಪ್ರೀತಿಯ ಪಯಣ’ ಕವನ ಸಂಕಲನದಲ್ಲಿ ಸೌಮ್ಯ ಅವರ ಕವನಗಳಲ್ಲಿ ಪ್ರೇಮಭಾವ, ಪ್ರೀತಿಯ ಆಸರೆ ಇಲ್ಲ. ಇಲ್ಲಿಯ ಆಕರ್ಷಣೆ, ಪ್ರೀತಿಯ ಸಾಕ್ಷಾತ್ಕಾರ, ಕಂಡ ಕನಸುಗಳ ಸಾಕಾರದಿಂದ ಆಶಯ, ಪ್ರೀತಿಗಾಗಿ ಪರಿತಪಿಸಿದ ಸಂಶದ ಅನುದಿನದ ಅನುಭವಗಳು, ಸಮನ್ವತೆಯ ಸಂಸ್ಕಾರ,

ಅನನ್ಯತೆಯ ಆಲಿಂಗನ ಅತೀ ನಂಬಿಕೆಯ ಅಡ್ಡ ಪರಿಣಾಮ, ವಿರಹದ ವೇದನೆ, ಅಲ್ಲದೆ ಪ್ರೀತಿಗಾಗಿ ಹೃದಯವು ವಿಚಲಿತವಾಗುತ ನೀರಿನಿಂದ ಹೊರಬಿದ್ದ ಮೀನಿನ ವಿಲಿವಿಲಿತ, ಹಸನ್ಮುಖಿ ಸಖನ ಮೋಸದಾಟಗಳ ನರಳಾಟದ ಭಾವನಾತ್ಮಕ ಕವನಗಳು, ಹೆಣ್ಣಿನ ಅಂತರಂಗದ ಕಣ್ಣುಗಳಿಂದ ಹಿಮಾಲಯದಷ್ಟು ಪ್ರೀತಿಸಿ ಗಿರಿಶಿಖರದಲ್ಲಿ ತನ್ನದಾಗಿಸಿಕೊಳ್ಳುವ ಸ್ತ್ರೀ ಭಾವನೆಗಳ ಕನಸುಗಳು, ಪ್ರೀತಿಗಾಗಿ ಹಪಹಪಿಸಿ ಪ್ರೀತಿ ಗೆಲ್ಲಲು ಪ್ರೇಮಿಯ ಹಸಿವಿನ ಆ ಕಣ್ಣುಗಳ ದೂರನೋಟದ ಕ್ಷಿತೀಜದ ದೃಶ್ಯ ವರ್ಣನೆ ಈ ಕವನ ಸಂಕಲನದ ಪ್ರತಿ ಕವನಗಳಲ್ಲೂ ಕಾಣಬಹುದು. ಕಣ್ಣಾರೆ ಕಂಡ ಪ್ರೇಮದಾಟದ ಕಷ್ಟ ಗುಡ್ಡಗಳು, ಹಿರಿಮೆ ಗಿರಿಮೆಗಳ ಮಧ್ಯೆ ಹೇಳಿದ ಪ್ರತಿ ಕವನಗಳು ಓದುಗರ ಮನದಲ್ಲಿ ದಶಕಗಳ ವರೆಗೆ ಸಹಜವಾಗಿ ನೆಲೆಯೂರುವವು.
 

About the Author

ಸೌಮ್ಯ (ಸೌಮ್ಯಾಮೃತ)

ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...

READ MORE

Related Books