ಋಣ

Author : ಹರವು ಸ್ಫೂರ್ತಿಗೌಡ

Pages 56

₹ 70.00




Year of Publication: 2019
Published by: ಸ್ಫೂರ್ತಿ ಪ್ರಕಾಶನ
Address: ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
Phone: 9481675573

Synopsys

ಋಣ- ಹರವು ಸ್ಫೂರ್ತಿಯವರ ಎರಡನೇ ಕವನ ಸಂಕಲನ. ಋಣದ ಮಾತನಾಡುವ ಈ ಕವಿ ‘ಬರೆದು ಮುಗಿಸಿದ ಮೇಲೂ ಮೋಹ ತುದಿ ಬೆರಳಲಿ ಉಳಿದಿದೆ’ ಎನ್ನುವ ಪದ್ಯವನ್ನು ಬರೆದು ಪ್ರೇಮದ ಮತ್ತೊಂದು ವರಸೆಯನ್ನು ಬಿತ್ತರಿಸಿದ್ದಾರೆ. ಈ ಅತ್ಯಂತಿಕ ಬಾಹುವಿನಲ್ಲಿ ಚಂದ್ರನನ್ನು ಸಿಲುಕಿಸುವ ಕ್ರೈಂ ಕೂಡಾ ನಡೆದಿದೆ. ಪ್ರೇಮದ ಸೋಲು ಎಲ್ಲಿ ಬಾಧಿಸುತ್ತದೆ. ಮನುಷ್ಯನ ನಡಿಗೆಯಲ್ಲೋ ಅವನ ದೇಹ ಹೊಯ್ದಾಟದಲ್ಲೋ ಎನ್ನುವ ದಾರುಣ- ಆದರೆ ಮೋಹಕ ಚಹರೆಗಳು ಇಲ್ಲಿ ಉಸುಕಿನಲ್ಲಿ ಮಿಂಚು ಹೊಡೆದ ಜಾಡುಗಳಂತೆ ಕಾಣುತ್ತವೆ ಎನ್ನುತ್ತಾರೆ ಮಂಜುನಾಥ್ ವಿ.ಎಂ.

ಪದ್ಯ ಟಿಸಿಲೊಡೆದು ಗಂಡುಹೆಣ್ಣಿನ ಮೈಥುನದ, ಪ್ರೇಮದ ಲೆಕ್ಕಾಚಾರಗಳು ನೆರೂಡನ ನೆನಪನ್ನು ಗಟ್ಟಿಗೊಳಿಸುತ್ತವೆ. ಅವು ನಚ್ಚನೆ ಉರಿದು ಬೂದಿಯಾಗುವ ಮರದ ತುಂಡುಗಳಂತೆ ಒಮ್ಮೊಮ್ಮೆ ಅನಿಸದೇ ಇರದು. ಅನೇಕ ಪ್ರಶ್ನೆಗಳಿವೆ. ಅಸಂಬದ್ಧ ಕನಸುಗಳಿವೆ. ಧಿಮಾಕಿನ ನಡೆ ಒಂದು ಮಗ್ಗುಲಿನಿಂದ ಕಾಣಿಸಿಕೊಳ್ಳುವ ಹಂತದಲ್ಲಿ ಪರದೆ ಇಳಿಯುವುದು ಮಳೆಯಷ್ಟೇ ರೌರ್ದ್ರವಾಗಿದೆ. ಇವರ ಅಜಾತಶತೃ ಅಂದರೆ ಪದ್ಯಮೋಹ, ಹೊಲದಲ್ಲಿ ಹಕ್ಕಿಗಳು ಸರಣಿ ಸಾಲಿನಲ್ಲಿ ತೊಯ್ದಾಡುವಂತೆ, ಗಲಿಬಿಲಿಗೊಳ್ಳುವ ಮೊಲಗಳಂತೆಯೂ ಸ್ಥಾಪಿತಗೊಳ್ಳುತ್ತವೆ. ಕಪ್ಪನೆಯ ಮೋಡ ಪ್ರವಾಹದ ಗತಿ ಬದಲಿಸಿದಲ್ಲಿ ಪಿಸುಗುಡುವ ಕಾವ್ಯ ಕ್ರಾಂತಿಯ ಪತಾಕೆಯನ್ನು ಜಗಜ್ಜಾಹಿರುಗೊಳಿಸುವಂತೆ ಇಲ್ಲಿನ ಪದ್ಯಗಳಿವೆ. 

About the Author

ಹರವು ಸ್ಫೂರ್ತಿಗೌಡ
(16 April 1989)

ಕವಿ, ಪತ್ರಕರ್ತೆ ಹರವು ಸ್ಫೂರ್ತಿಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಬ್ಬು’, ‘ಕೋಳಿ ಅಂಕ’ ಸಾಕ್ಷಿಚಿತ್ರ ನಿರ್ದೇಶನ. ಕನ್ನಡ ಪುಸ್ತಕ ಪ್ರಾದಿಕಾರದಿಂದ ‘ಹುಣಸೆ ಹೂ’ ಮೊದಲ ಕವನ ಸಂಕಲನ ಪ್ರಕಟಣೆ, ‘ಋಣ’ ಅವರ ಎರಡನೆ ಕವನ ಸಂಕಲನ, ಸೂಲಂಗಿ ಕಾದಂಬರಿ ಅಚ್ಚಿನಲ್ಲಿದೆ. ಜನಶ್ರೀ, ಪ್ರಜಾಟಿವಿ, ಬಿಗ್ ಬಾಸ್, ಸೂಪರ್ ಮಿನಿಟ್, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಣೆ. ಸದ್ಯ ಪ್ರಜಾವಾಣಿಯಲ್ಲಿ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Conversation

Related Books