ಜಟಾಯು ಪಕ್ಷಿಗೆ ಶ್ರದ್ದಾಂಜಲಿ

Author : ಜ್ಯೋತಿ ಗುರುಪ್ರಸಾದ್

Pages 208

₹ 160.00




Published by: ಸೃಷ್ಠಿ ಬೆಂಗಳೂರು.

Synopsys

ಒಟ್ಟು 103 ಕವಿತೆಗಳನ್ನು ಹೊಂದಿರುವ ಈ ಕಾವ್ಯ ಕೃತಿಯೊಳಗಿರುವ ಕವಿತೆಗಳ ಪ್ರತಿ ಸಾಲುಗಳೂ ಪ್ರೀತಿಯನ್ನು ತುಂಬಿಕೊಂಡಿವೆ. ವರ್ತಮಾನದ ಕ್ರೌರ್ಯಗಳನ್ನು ನೋಡುತ್ತಾ, ಅದಕ್ಕೆ ಸಿನಿಕರಾಗಿ ಪ್ರತಿಕ್ರಿಯಿಸದೆ ಆಶಾಭಾವದಿಂದ ಅವರು ಬರೆಯುತ್ತಾರೆ. ಆದುದರಿಂದಲೇ ಪ್ರೀತಿಯ ಇಟ್ಟಿಗೆಗಳಿಂದ ಹೊಸ ನಾಡನ್ನು ಕಟ್ಟುವ ತುಡಿದ ಅವರ ಪ್ರತಿ ಕವಿತೆಗಳಲ್ಲಿವೆ. ದೀಪಾವಳಿ ಪದ್ಯದಲ್ಲಿ ಕತ್ತಲು-ಬೆಳಕಿನ ನಡುವಿನ ಸಂಬಂಧವನ್ನು ಕವಯಿತ್ರಿ ಕಟ್ಟಿಕೊಡುತ್ತಾರೆ. ಪದ್ಯದ ಸಾಂಗತ್ಯವನ್ನು ವಿವರಿಸುವ 'ಪದ', ಒದ್ದೆ ಭಾಷೆಯಲ್ಲಿ ಮಾತನಾಡುವ, ಶುದ್ಧವಾಗುವ 'ಕಣ್ಣಂಚಿನ ನೀರು', ಜೋಡಿ ಹಕ್ಕಿಗಳು ಜೊತೆಯಾಗಿರಲಿ ಎಂದು ಹಾರೈಸುವ 'ಪುರಾಣದ ನೆನಪು', ಜಟಾಯುವಿನ ಮೂಲಕ ರಾಮನನ್ನು ನೋಡುವ “ಜಟಾಯು ಪಕ್ಷಿಗೆ ಶ್ರದ್ದಾಂಜಲಿ”, ಮಗುವಿನ ಮುಗ್ಧತೆಯ ಅಗಾಧತೆಯನ್ನು ಹೇಳುವ 'ಜ್ಞಾನ ಚಂದ್ರ' ಬದುಕಿನ ಹತ್ತು ಹಲವು ಮುಖಗಳಿಗೆ ಮುಖಾಮುಖಿಯಾಗುವ ಹೃದ್ಯ ಕವಿತೆಗಳು ಈ ಕೃತಿಯಲ್ಲಿದೆ.

About the Author

ಜ್ಯೋತಿ ಗುರುಪ್ರಸಾದ್
(16 July 1965)

ಸೂಕ್ಷ್ಮ ಸಂವೇದನೆಯಿಂದ ಬರೆಯುವ ಜ್ಯೋತಿ ಗುರುಪ್ರಸಾದ್‌ (1965) ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಆರ್.ಜ್ಯೋತಿ ಎಂಬ ಹೆಸರಿನ ಇವರ ಕಾವ್ಯನಾಮ ಜ್ಯೋತಿ ಗುರುಪ್ರಸಾದ. ಟಿ. ನರಸೀಪುರ ಮೂಲದವರಾದ ಅವರು ಟಿ. ನರಸೀಪುರ, ಮಂಡ್ಯ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಗೃಹಸ್ಥ ಜೀವನಕ್ಕೆ ಕಾಲಿಟ್ಟು ಕಾರ್ಕಳಕ್ಕೆ ಬಂದರು. ಕಾರ್ಕಳದ ಭುವನೇಂದ್ರ ಕಾಲೇಜು, ಕ್ರೈಸ್ಟ್‌ಕಿಂಗ್‌ ಪ.ಪೂ. ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಕಾರ್ಕಳದ ಎಸ್.ವಿ.ಮಹಿಳಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಜ್ಯೋತಿ ಅವರ ಮೊದಲ ಕವನ ಸಂಕಲನ’ಚುಕ್ಕಿ’ ...

READ MORE

Awards & Recognitions

Related Books