ನಾನು ಮುಟ್ಟಾಗಿದ್ದೇನೆ

Author : ಶಿವರಾಜ ವತ್ತುಮುರವಣಿ

Pages 100

₹ 100.00




Year of Publication: 2020
Published by: ಶಿವು ಪ್ರಕಾಶನ
Address: 20/38, ಅಂಬಾ ನಿವಾಸ, 2ನೇ ಅಡ್ಡರಸ್ತೆ, ಎಂ.ಆರ್.ಎಫ್. ಟಯರ್.ಶಾಪ್, ರಾಮಕೃಷ್ಣ ನಗರ, ಸಾರಕ್ಕಿ ಸಿಗ್ನಲ್, ಬೆಂಗಳೂರು-560078

Synopsys

ಲೇಖಕ ಶಿವರಾಜ ದತ್ತುಮುರುವಣಿ ಅವರು ಬರೆದ ಕವನಗಳ ಸಂಕಲನ-ನಾನು ಮುಟ್ಟಾಗಿದ್ದೇನೆ. ಕೃತಿಗೆ ಮುನ್ನುಡಿ ಬರೆದ ಡಾ. ಕೋ.ವೆಂ. ರಾಮಕೃಷ್ಣೇಗೌಡ ‘ಗಂಡಸರ ಗಮನಕ್ಕೆ ಬಾರದ ಅದೆಷ್ಟೋ ಸಂಗತಿಗಳ ಕಡೆಗೂ ಗಮನ ನೀಡುವ ಧರ್ಮ, ದೇವರು, ವೇಶ್ಯೆ, ಜಾತಿ, ವೈಷಮ್ಯ, ಯುದ್ಧ ಮುಂತಾದ ವಿಷಯಳನ್ನು ಹೊಸದಾಗಿ ನೀಡುವ ಕವಿ, ತನ್ನ ಚಿಕಿತ್ಸಕ ದೃಷ್ಟಿಯಿಂದ ಅವುಗಳನ್ನು ವಿಮರ್ಶೆಗೆ ಒಳಗು ಮಾಡುವುದನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು’ ಎಂದು ಶ್ಲಾಘಿಸಿದ್ದಾರೆ. 

ಕೃತಿಗೆ ಬೆನ್ನುಡಿ ಬರೆದ ಕವಯತ್ರಿ ಎಚ್.ಎಲ್. ಪುಷ್ಪ ‘ಕವಿಗೆ ಹೆಣ್ಣಿನ ಮುಟ್ಟು ಸೂತಕಗಳು ನಿಗೂಢ ಕ್ರಿಯೆಗಳಾಗಿ ಕಾಣುತ್ತಿಲ್ಲ. ತಾನು ಕೂಡ ಮುಟ್ಟು, ಮುಟ್ಟಿನ ನಂತರದ ಗರ್ಭದಿಂದ ಒಂಬತ್ತು ತಿಂಗಳು ತಾಯಿಯನ್ನು ಆಶ್ರಯಿಸಿ ಜನ್ಮ ತಳೆದವನು ಎಂಬ ಕೃತಜ್ಞತಾ ಭಾವವಿದೆ. ಕೆಳವರ್ಗದವರನ್ನು, ಹೆಣ್ಣನ್ನು ಸಾರಾಸಗಟಾಗಿ ಅಸ್ಪೃಶ್ಯರೆಂದು ವರ್ಗೀಕರಿಸಿದ ಸಂದರ್ಭದಲ್ಲಿ, ಇಲ್ಲಿಯ ಕವನಗಳು ವಿವೇಕದ ಮಾತುಗಳು ನೆಮ್ಮದಿ ತರುವಂತಹವು’ ಎಂದು ಪ್ರಶಂಸಿಸಿದ್ದಾರೆ.

 

About the Author

ಶಿವರಾಜ ವತ್ತುಮುರವಣಿ
(11 June 1993)

ಲೇಖಕ ಶಿವರಾಜ ವತ್ತುಮುರುವಣಿ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದತ್ತುಮುರವಣಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸಿರಗುಪ್ಪದಲ್ಲಿ ಪ್ರೌಢಶಿಕ್ಷಣ, ಬಳ್ಳಾರಿಯಲ್ಲಿ ಪಿಯುಸಿ, ಬೆಂಗಳೂರಿನಲ್ಲಿ ಬಿ.ಎ. ಪೂರ್ಣಗೊಳಿಸಿದರು. ಶ್ರೀ ನಾದಬ್ರಹ್ಮ ತ್ಯಾಗರಾಜ್ ಸಂಗೀತ ನೃತ್ಯ ಅಕಾಡೆಮಿಯ ನಂದ್ಯಾಲ ಚಂದ್ರಿಕಾ ಅವರ ಬಳಿ ಕೂಚಿಪುಡಿ ನೃತ್ಯ ತರಬೇತಿ ಪಡೆದು ನಂತರ ಅವರೇ ಶಿವ ನೃತ್ಯ ಪ್ರಿಯ ಸಂಗೀತ ಅಕಾಡೆಮಿ ಸ್ಥಾಪಿಸಿ, ಬಡವ, ಆಸಕ್ತ, ವಿಶೇಷವಾಗಿ ವಿಕಲ ಚೇತನರಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ರಘುವನ ಹಳ್ಳಿಯ ಶ್ರೀ ಸ್ಕಂದ ಮಾತಾ ಕಲಾ ಕೇಂದ್ರದಲ್ಲಿ ನೃತ್ಯ ಶಿಕ್ಷಕರಾಗಿದ್ದಾರೆ. ಜಾನಪದ ಗಾಯಕರೂ ಆಗಿದ್ದು, ನಾಟಕದಲ್ಲಿ ...

READ MORE

Related Books