ಸಂತೋಷ-ಸಂದೇಶ

Author : ಡಿ. ಪದ್ಮನಾಭ

Pages 118

₹ 100.00
Year of Publication: 2018
Published by: ವೆಂಕಟಗಿರಿ ಪ್ರಕಾಶನ
Address: ಮೈಸೂರು
Phone: 9741731582

Synopsys

ಡಿ. ಪದ್ಮನಾಭ. ಅವರ ಸಂತೋಷ-ಸಂದೇಶ ಕವನ ಸಂಕಲನವಾಗಿದೆ. ಕಾವ್ಯಂ ಆನಂದಾಯ ಸಂತೋಷಂ ಜನಯೇತ್ ಪ್ರಾಜ್ಞಃ ಎಂಬ ಸೂಕ್ತಿಯಂತೆ ರಮ್ಯತೆಯ ಜಾಡು ಹಿಡಿದು ರಚಿಸಿದ ಕವನಗಳು ಇಲ್ಲಿವೆ. ಒಟ್ಟು 92 ಕವನಗಳಿದ್ದು ಎಲ್ಲವೂ ಕೌಟುಂಬಿಕ ಚೌಕಟ್ಟಿನಲ್ಲಿ ಆನಂದವನ್ನು ಅರಸುವ, ಜೊತೆಗೆ ಊರ್ಮಿಳಾ, ರಾಧಾ, ದುರ್ಗೆ, ವಿಷ್ಣು ಪಾರ್ವತಿ ಮುಂತಾದ ಪಾತ್ರಗಳು ಕೇಂದ್ರವಾದರೂ ಸೈನಿಕನ ಮಡದಿ, ಗೌರವ ಹಬ್ಬದ ಬಾಗಿನಕ್ಕೆ ಕಾದಿರುವ ಸೋದರಿ, ಸೂರ್ಯೋದಯ ಸೂರ್ಯಾಸ್ತ, ಕಡಲತಡಿಯಲ್ಲಿ ಉಕ್ಕುವ ಮನದ ಭಾವಗಳು ಪ್ರಣಯ, ವಿರಹ, ಯುವಪ್ರೇಮಿಗಳ ತುಡಿತ ಪ್ರಕೃತಿಚಿತ್ರಣ, ಜೊತೆಗೆ ಭಕ್ತಿ ಬಾಳಿನಲ್ಲಿ ಭರವಸೆ ದೇಶಪ್ರೇಮ ಮುಂತಾದ ಆದರ್ಶಗಳ ಬಗ್ಗೆ ಸುಲಲಿತವಾಗಿ ಸುಂದರ ಪ್ರತಿಮೆಗಳೊಂದಿಗೆ ಮೂಡಿದ ಕವನಗಳು ಇಲ್ಲಿವೆ

About the Author

ಡಿ. ಪದ್ಮನಾಭ
(06 February 1966)

ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...

READ MORE

Related Books