ಪ್ರೀತಿಯಿಲ್ಲದೆ ಬದುಕಿದವರಾರು

Author : ಮಲ್ಲಿನಾಥ ಶಿ. ತಳವಾರ

Pages 106

₹ 120.00
Year of Publication: 2019
Published by: ಸಮನ್ವಯ ಪ್ರಕಾಶನ, ಕಲಬುರಗಿ
Address: ಸಮನ್ವಯ ವಿವಿಧೊದ್ದೇಶ ಸಹಕಾರ ಸಂಘ ನಿಯಮಿತ, ಮಿನಿ ವಿಧಾನ ಸೌಧ ಹಿಂದೆ, ಕಲಬುರಗಿ

Synopsys

'ಪ್ರೀತಿಯಿಲ್ಲದೆ ಬದುಕಿದವರಾರು' ಕವನ ಸಂಕಲನ ಕವಿ ಮಲ್ಲಿನಾಥ ತಳವಾರ. ಕೃತಿಗೆ ಮುನ್ನುಡಿ ಬರೆದ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ‘ ಭರವಸೆ ಮೂಡಿಸುವ ಉದಯೋನ್ಮುಖ ಕವಿ ಮತ್ತು ಕಾವ್ಯದಲ್ಲಿ ಪ್ರಖರತೆ ಇದೆ. ಅವರ ಬರಹ ಬದುಕಿನಲ್ಲಿ ಪ್ರೀತಿ ಹಾಸುಹೊಕ್ಕಾಗಿದೆ.ಅವರು 'ಚಿನ್ನ' ಕೊಡುವ 'ಕನ್ನಡ' ಇಂದು “ಅನ್ನ” ಕೊಡುವ ತಾಯಿಯಾಗಬೇಕು ಎಂದು ಹಂಬಲಿಸುತ್ತಾರೆ. ನಮ್ಮ ನಾಡು ಅಷ್ಟೇ ಅಲ್ಲ, ನಮ್ಮ ಜೀವ ಕನ್ನಡ ಮಯವಾಗಬೇಕೆಂಬ ಅವರ ಬಯಕೆ ಹಚ್ಚಹಸಿರಾಗಿ ಉಸಿರಾಗಿ ಹೊರ ಹೊಮ್ಮಿ ಬಂದಿದೆ. ಹಾಗೆಯೇ, ಮನುಷ್ಯನಿಗಿಂತ ಗಿಡ ಮರಗಳು, ಹಕ್ಕಿ ಪಕ್ಷಿಗಳೇ ಶ್ರೇಷ್ಠ ಎನ್ನುವಂತಹ ವಿಷಯಗಳ ಮೇಲೆ 'ಕ್ಷ' ಕಿರಣ ಬೀರುವ ಕವನಗಳನ್ನು ಕ್ರೋಡೀಕರಿಸಿ ಹೊರಬರುವ 'ಪ್ರೀತಿಯಿಲ್ಲದೆ ಬದುಕಿದವರಾರು' ಕವನ ಸಂಕಲನ ಓದುಗರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರವಾಗುತ್ತದೆಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದು ಪ್ರಶಂಸಿದ್ದಾರೆ.

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books