ಸಂಯೋಗ

Author : ರೇಚಂಬಳ್ಳಿ ದುಂಡಮಾದಯ್ಯ

Pages 124

₹ 100.00




Year of Publication: 2021
Published by: ವೈದ್ಯವಾರ್ತಾ ಪ್ರಕಾಶನ
Address: ವಿದ್ಯಾರಣ್ಯಪುರಂ, ಮೈಸೂರು- 560008
Phone: 9448402092

Synopsys

‘ಸಂಯೋಗ’ ಸ್ವಾತಂತ್ರ್ಯ ಮತ್ತು ಸಮಾನತೆ ಮುಖಾಮುಖಿಯಾದಾಗ ಕೃತಿಯು ಲೇಖಕ ರೇಚಂಬಳ್ಳಿ ದುಂಡಮಾದಯ್ಯ ಅವರು ರಚಿಸಿರುವ ಖಂಡಕಾವ್ಯ. ಇದು ಲೇಖಕ ರೇಚಂಬಳ್ಳಿ ದುಂಡಮಾದಯ್ಯ ಅವರ ಮೂರನೆಯ ಕೃತಿ. ಈ ಕೃತಿಯಲ್ಲಿ ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್ ರವರ ಹೋರಾಟದ ಬದುಕು ಖಂಡಕಾವ್ಯದಲ್ಲಿ ಚಿತ್ರಿತವಾಗಿರುವುದು - ವಿಶೇಷವಾಗಿದೆ. ಅದಕ್ಕಿಂತಲೂ ವಿಶೇಷವಾದದ್ದು ಇಂದ್ರನ ನಂದನವನದಲ್ಲಿ ಗಾ೦ಧೀಜಿ ಮತ್ತು ಬಾಬಾ ಸಾಹೇಬರು ಮುಖಾಮುಖಿಯಾಗಿ ಗತಕಾಲದ ಕೆಲ ಘಟನೆಗಳನ್ನು ಮೆಲಕು ಹಾಕಿರುವುದು! ಇಬ್ಬರು ಮಹಾನ್ ನಾಯಕರನ್ನು ಒಂದೆಡೆ ಕುಳ್ಳಿರಿಸಿ, ಅತ್ಯಂತ ಆಪ್ತವಾಗಿ ಮಾತನಾಡಿಸಿರುವ ಚಿತ್ರಣ ಕಾಲ್ಪನಿಕವಾದರೂ ತುಂಬಾ ಮನೋಜ್ಞವಾಗಿದೆ. ಈ ಕೃತಿಯಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಊರುಗೋಲಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾತ್ರವಲ್ಲ, ಅಂಬೇಡ್ಕರರ ಕೋಲಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮರದಿಂದ ಬಿದ್ದ ತೆಂಗಿನಕಾಯಿಯ ಹೊಡೆತಕ್ಕೆ ಅಂಬೇಡ್ಕರರ ಕೋಲು ಮುರಿಯುವುದು, ಕೋಲಿಲ್ಲದೆ ನಡೆಯುವುದಾದರೂ ಹೇಗೆಂದು ಗಾಂಧೀಜಿ ಕಳವಳ ವ್ಯಕ್ತಪಡಿಸುವುದು, ವಸಿಷ್ಠರು ಪರಾಯ ಕೋಲಿನ ವ್ಯವಸ್ಥೆ ಮಾಡುತ್ತೇನೆಂದು ಹೇಳುವುದು, ಮರುಯೌವನ ಪಡೆದವನಿಗೆ ಕೋಲಿನ ಅಗತ್ಯವಿಲ್ಲ ಎಂದು ಹೇಳುವುದು, ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಕೃತಿಯ ಪರಿಸಮಾಪ್ತಿಯೂ ಕೂಡ ಕೋಲಿನ ಪ್ರಸ್ತಾಪದೊಡನೆಯೇ ಆಗಿದೆ! ಕವಿ ಇಲ್ಲಿ ಊರುಗೋಲಿನ ಮೂಲಕ ಅಂಬೇಡ್ಕರ್ ವಾದದ ನಿರಂತರತೆಯನ್ನು ಸೂಚ್ಯವಾಗಿ ಪ್ರತಿಪಾದಿಸಿದ್ದಾರೆ. ಅಡೆತಡೆಗಳು ಅಂಬೇಡ್ಕರ್‌ವಾದಕ್ಕೆ ಮುಪ್ಪಿಲ್ಲ, ಎಷ್ಟೇ ಬಂದರೂ ಮರುಯೌವನಿಗನಂತೆ ಮುಂದುವರಿಯಬೇಕು, ಮುಂದುವರೆಯುವುದು ಅನಿವಾರ್ಯವೂ ಹೌದು ಎಂಬುದನ್ನು ಊರುಗೋಲಿನ ಮೂಲಕ ಸಂಕೇತಿಸಿದ್ದಾರೆ.

About the Author

ರೇಚಂಬಳ್ಳಿ ದುಂಡಮಾದಯ್ಯ

ರೇಚಂಬಳ್ಳಿ ದುಂಡಮಾದಯ್ಯ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ರೇಚಂಬಳ್ಳಿ ಗ್ರಾಮ. ತಂದೆ ತೆಂಕಯ್ಯ ತಾಯಿ ಮಾದಮ್ಮ. ಪ್ರಸ್ತುತ ಚಾಮರಾಜನಗರದಲ್ಲಿ ನೆಲೆಸಿದ್ದಾರೆ. ಕಾಲೇಜು ದಿನಗಳಿಂದಲೆ ಸಾಹಿತ್ಯಾಭಿರುಚಿಯನ್ನು ಹೊಂದಿದ ಅವರು ಪಿಯುಸಿ ಓದುವಾಗ "ನೆನಪಿನ ದೋಣಿ" ಯೆಂಬ ಕಿರು ಕಾದಂಬರಿಯನ್ನು ರಚಿಸಿದರು. ಪತ್ರಿಕೆಗಳಿಗೆ ಕತೆ ಕವನ ಅಂಕಣಬರಹ ಚುಟುಕುಗಳನ್ನು ಬರೆಯುವುದು ಅವರ ಹವ್ಯಾಸವಾಗಿದೆ. ವೃತ್ತಿಯಲ್ಲಿ ನಿವೃತ್ತ ಪೋಸ್ಟ್ ಮಾಸ್ಟರ್ ಆಗಿರುವ ಅವರ ‘ಚುಟುಕು - ಸ್ಪಂದನ’, ‘ಸಂಯೋಗ’, ‘ಕೊಟ್ಟೂರೇಗೌಡ ಮತ್ತು ಆತನ ಕತೆಗಳು’  ಕೃತಿಗಳು ಪ್ರಕಟವಾಗಿವೆ.  ...

READ MORE

Related Books