ಸುರಹೊನ್ನೆ

Author : ವಿಶಾಲಾ ಆರಾಧ್ಯ

Pages 76

₹ 70.00
Year of Publication: 2018
Published by: ಅಲ್ಲಮ ಪ್ರಕಾಶನ
Address: #10, 1ನೇ ಮಹಡಿ, 1ನೇ ತಿರುವು, ಬೊಮ್ಮಸಂದ್ರ, ಬೆಂಗಳೂರು- 560099
Phone: 9886464711

Synopsys

‘ಸುರಹೊನ್ನೆ’ ಲೇಖಕಿ ವಿಶಾಲಾ ಆರಾಧ್ಯ ಅವರ ಕವನ ಸಂಕಲನ. ಒಟ್ಟು 59 ಕವನಗಳಿವೆ.  ಹಿರಿಯ ಕವಿ, ವಿಮರ್ಶಕಿ ಡಾ. ಎಚ್.ಎಲ್. ಪುಷ್ಪಾ ಅವರಯು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಕವಿತೆಗಳಲ್ಲಿ ವಸ್ತು ವೈವಿದ್ಯತೆಗಳಿವೆ. ಬಹುತೇಕ ಕವಿತೆಗಳ ಕೇಂದ್ರ ಹೆಣ್ಣು. ತಾನು ಕೇಂದ್ರದಲ್ಲಿದ್ದು ತನ್ನಂತೆಯೇ ಸಮಾಜದಲ್ಲಿರುವ ಹಲವು ಹೆಣ್ಣುಗಳ ಬದುಕು ಹಾಗೂ ವ್ಯಕ್ತಿತ್ವಗಳನ್ನು ಗಮನಿಸುತ್ತಿದ್ದಾಳೆ , ಈ ಗಮನಿಸುವಿಕೆಯಿಂದ ಅವರಿಗೊಂದು ತಿಳಿವಳಿಕೆಯೊಂದು ಲಭ್ಯವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿನ ಕವಿತೆಗಳು ಸಮಾಜದೊಡನೆ ಸಹನೀಯ ಸಂಬಂಧವನ್ನು ಕಟ್ಟಿಕೊಳ್ಳುವ ಅಪೇಕ್ಷೆಯಲ್ಲಿವೆ. ಈ ಸಂಕಲನದಲ್ಲಿ ವಿಶೇಷ ಮಕ್ಕಳಿಗಾಗಿ ಬರೆದ ಕವಿತೆಗಳು ಗಮನ ಸೆಳೆಯುವಂತಿವೆ.

About the Author

ವಿಶಾಲಾ ಆರಾಧ್ಯ

ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ...

READ MORE

Related Books