ಚಂಪಾ ಕಾವ್ಯ

Author : ಚಂದ್ರಶೇಖರ ಪಾಟೀಲ (ಚಂಪಾ)

Pages 684

₹ 400.00
Year of Publication: 2006
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು -560009
Phone: 22266088

Synopsys

‘ಚಂಪಾ ಕಾವ್ಯ’  ಪ್ರೊ. ಚಂದ್ರಶೇಖರ ಪಾಟೀಲ ಅವರ ಚಂಪಾ ಸಾಹಿತ್ಯದ ಎರಡನೇಯ ಸಂಪುಟವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರು, ಚಂದ್ರಶೇಖರ ಪಾಟೀಲರು ತಮ್ಮ ಹದಿಹರೆಯದಲ್ಲಿಯೇ ಕವಿತೆ ಬರೆಯತೊಡಗಿ ವಿ.ಕೃ. ಗೋಕಾಕರ ಆಶೀರ್ವಚನದೊಂದಿಗೆ ’ಬಾನುಲಿ' ಸಂಕಲನವನ್ನು ಪ್ರಕಟಿಸಿ, ನಲವತ್ತೇಳು ವರ್ಷಗಳೇ ಕಳೆದಿವೆ. ಪಾಟೀಲರ ಕಾವ್ಯದಲ್ಲಿ ಅಂದಿನಿಂದ ಇಂದಿನವರೆಗೆ ಅವಿರತವಾಗಿ ಹರಿದು ಬಂದಿರುವ ಕೆಲವು ಸೆಲೆಗಳಿವೆ. ಅವು ಮೂಲಭೂತವಾಗಿ ವ್ಯಕ್ತಿ ಹಾಗೂ ಅವನ ಸಂಬಂಧಗಳನ್ನು ಕೇಂದ್ರದಲ್ಲಿ ಹೊಂದಿವೆ. ಅವರು ಸಾಮಾಜಿಕ ಮನುಷ್ಯನಲ್ಲಿ ತೋರಿಸಿರುವ ಆಸಕ್ತಿ ಕೂಡ ಮಾನವನ ಅಂತರಂಗದಲ್ಲಿಯೇ ಮನೆ ಮಾಡಿದೆ. ಈ ಕತೆ ಬರೆಯಲು ಏಕಾಂತ ಬೇಡವೆಂದು ಹೇಳಿದ ಚಂಪಾ, ಲೋಕಾಂತವನ್ನೇ ಏಕಾಂತದಲ್ಲಿ ಅಡಗಿಸಿ ಕೊಂಡವರು. ಚಂಪಾ ಅವರ ಸೃಜನಶೀಲತೆಯ ಸ್ವರೂಪವನ್ನು ಗ್ರಹಿಸುವುದು ಸುಲಭವಲ್ಲ. ಅವರ ಕವಿತೆಯ ಮೇಲೆ ಮೊದಲಿನಿಂದಲೂ ಯಾವುದೇ ಕವಿಯ ತೀವ್ರ ಪ್ರಭಾವವಾದಂತೆ ತೋರುವುದಿಲ್ಲ. ಗದ್ಯದಲ್ಲಿ ಕಾವ್ಯತ್ವ ಕಾವ್ಯದಲ್ಲಿ ಗದ್ಯತನ ಮುಂತಾದ ಫರ್ಮಾನುಗಳಿಂದಲೂ ಅವರು ಎಂದೂ ವಿಚಲಿತರಾಗದೆ, ತಮಗೆ ಅನನ್ಯವಾದ ದಾರಿಯಲ್ಲಿ ನಡೆದು ಬಂದಿದ್ದಾರೆ. ಅವರು ಯಾವಾಗಲೂ ಭಾವನೆ, ವಿಡಂಬನೆ ಮತ್ತು ವಿಚಾರಗಳ ಕುದುರೆ ಕಟ್ಟಿದ ವಾಹನ ಎಂದಿದ್ದಾರೆ. ಆದರೆ ಇಷ್ಟೇ. ಈ ವ್ಯಕ್ತಿತ್ವವು ಸ್ವನಿರ್ಮಿತವಲ್ಲವೆನ್ನುವುದು ಅವರಿಗೆ ಗೊತ್ತು. ಅರವತ್ತರ ದಶಕದಲ್ಲಿಯ "ಮಧ್ಯಬಿಂದು" ಸಂಕಲನದಲ್ಲಿ ಬರುವ ಈ ಸಾಲುಗಳು ಈ ಸಂಗತಿಯ ಮೇಲೆ ಬೆಳಕು ಚೆಲ್ಲುತ್ತವೆ. “ನನಗೆ ನಾನು ಪಿಸುಗುಟ್ಟುತ ಹೇಳುತಿರುವ ಈ ಹಾಡೂ ಇದ್ದುದಲ್ಲ ಹಾಳುಮಾಡಿ ಮಳೆಯು ಮರಳಿ ಹೋದ ಮೇಲೆ ಗುಳುಗುಳಿಸುತ ಹರಿವ ಯಾವ ಬೀದಿನೀರ ನಾದವೋ! ಈ ನಾನು-ನಾನು ನಾನು ಎಂದು ಎದೆಯ ಸೆಟೆಸಿ ಅಲೆವ ಈ ನಾನು-ಯಾವ ಬೆಳಕೋ! ಯಾವ ಬೆಳಕು ಯಾರ ಮೇಲೆ ಬಿದ್ದು ಉದಿಸಿದಂಥ ನೆರಳೊ! ಯಾವ ನೆರಳ ನೆರಳೋ! ಈ ಸಾಲುಗಳು ವ್ಯಕ್ತಿ, ಸಮಾಜ ಮತ್ತು ಇತಿಹಾಸಗಳ ನಡುವೆ ಇರುವ ಅಂತಸ್ಸಂಬಂಧಗಳು ಮತ್ತು ಅವುಗಳ ಪ್ರತ್ಯೇಕತೆಯನ್ನು ಬಹಳ ಚೆನ್ನಾಗಿ ಹೇಳುತ್ತವೆ. ಹಾಗೆ ನೋಡಿದರೆ, ಬೇಂದ್ರೆಯವರ ಮನುಷ್ಯತನ ಮತ್ತು ಕವಿತನಗಳ ನಡುವಿನ ಅಂತರವನ್ನು ಹೇಳುತ್ತಾ ಬರೆದ ಕವಿತೆಯು ಸ್ವತಃ ಇವರಿಗೇ ಅಷ್ಟೇ ಚೆನ್ನಾಗಿ ಅನ್ವಯಿಸುತ್ತದೆ ಎಂದಿದ್ದಾರೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books