ರೊಟ್ಟಿ ಬೇಯಲು ಪ್ರೇಮದ ಬೂದಿ

Author : ದೇವಶೆಟ್ಟಿ ಮಹೇಶ್

Pages 38

₹ 25.00




Year of Publication: 1999
Published by: ಮಹಾಮನೆ ಪ್ರಕಾಶನ
Address: ಧಾರವಾಡ

Synopsys

‘ರೊಟ್ಟಿ ಬೇಯಲು ಪ್ರೇಮದ ಬೂದಿ’ ಕವಿ ದೇವಶೆಟ್ಟಿ ಮಹೇಶ್ ಅವರ ಕವನ ಸಂಕಲನ.ಇಲ್ಲಿನ ಕವಿತೆಗಳಲ್ಲಿ ಜೀವಂತಿಕೆ ಚಲಿಸುವಂತೆ, ಸಂಭ್ರಮವೂ ದಿಗ್ಘ್ರಮೆಗೊಳ್ಳುವಂತೆ ಬರೆದ ಭಾವಗಳಾಗಿವೆ. ಸತ್ಯದ ನೆತ್ತಿಯ ಮೇಲೆ ಸುತ್ತಿಗೆ ಜಡಿದು ಹೇಳಲಾಗದ್ದನ್ನೆಲ್ಲಾ ಹೇಳಿದರೂ, ಕೇವಲ ಹೇಳಿಕೆಯಾಗದೇ ಕಾಳಜಿಯಾಗುವ, ಕಳಕಳಿಯಾಗಿಸುವ ಕವಿತೆಗಳ ಶೈಲಿಯೇ ಕಾವ್ಯದ ನಿಜ ಅರ್ಥದೆಡೆಗೆ ನಡೆಸುತ್ತವೆ. ಕವಿತೆಯೆಂದರೆ ಕೇವಲ ಕವಿತೆಯಾಗಿರಬೇಕು. ಹಳವಂಡಗಳೇ ಬ್ರಾಂಡುಗಳ ಅಂಗಿ ತೊಟ್ಟು , ಪೂರ್ವಾಗ್ರಹಗಳ ಪಹರೆಯಲಿ ಅವರಿವರ ಬೇಕಾದವರ ಸಲಾಮುಗಳ ಸಂತೆಯಲ್ಲಿ ಮೆರೆಯುತ್ತಿರುವಾಗ ನಡೆದ ಮೆರವಣಿಗೆಯ ಬಿಟ್ಟು, ಕ್ಷಣಕಾಲ ಹೊರಳಿ ನೋಡಿಸಿಕೊಳ್ಳುವ ತಾಕತ್ತಿರುವ ಈ ಸಾಲುಗಳಿಗೆ ಸಿದ್ಧ ಸೂತ್ರಗಳ ಜಾಡಿಸೊದ್ದು ತನ್ನೆಡೆಗೆ ಲಕ್ಷ್ಯ ಸೆಳೆದುಕೊಳ್ಳುವ ಶಕ್ತಿ ಇದೆ. ಈ ಶಕ್ತಿಯೇ ಇಲ್ಲಿನ ಪ್ರಮುಖ ಅಂಶ.

About the Author

ದೇವಶೆಟ್ಟಿ ಮಹೇಶ್

 ಪಬ್ಲಿಕ್ ಟಿ ವಿ ಸಿನಿಮಾ ವಿಭಾಗದ ಮುಖ್ಯಸ್ಥರಾದ ಮಹೇಶ ದೇವಶೆಟ್ಟಿ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ೦) ಪದವಿ ಪಡೆದಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ರಂಗಂಪೇಟೆಯವರಾದ ಮಹೇಶ ಅವರ ಹುಟ್ಟಿ-ಬೆಳೆದದ್ದು ಕೊಪ್ಪಳದಲ್ಲಿ. ಧಾರವಾಡದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ ಪದವಿ (ಬಿ.ಎ) ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯಲು ಆರಂಭಿಸಿದರು. ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ ಏರ್ಪಡಿಸಿದ್ದ ಕವನ ಸ್ಪಧೆಯಲ್ಲಿ ಬಹುಮಾನ ಪಡೆದಿರುವ ಮಹೇಶ ಅವರು ’ರೊಟ್ಟಿ ಬೇಯಲು ಪ್ರೇಮದ ಬೂದಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಹಾಯ್‌ ಬೆಂಗಳೂರು’ ಪತ್ರಿಕೆಯಲ್ಲಿ ಸಿನಿಮಾ ಪತ್ರಕರ್ತರಾಗಿ ವೃತ್ತಿಜೀವನ ...

READ MORE

Related Books