ಮಾಯೆ ಮದ್ದಲೆ

Author : ಡಿ.ಎನ್‌. ಅಕ್ಕಿ

Pages 84

₹ 85.00




Year of Publication: 2008
Published by: ಕವಿಕುಂಚ ಪ್ರಕಾಶನ
Address: ಅಂಚೆ: ಗೋಗಿ, ತಾ: ಶಹಾಪುರ, ಜಿ: ಕಲಬುರಗಿ-585309
Phone: 9448577898

Synopsys

”ಮಾಯೆ ಮದ್ದಳೆ’ ಕವಿ ಡಿ.ಎನ್. ಅಕ್ಕಿ ಅವರ ಕವನ ಸಂಕಲನ. ವಿಡಂಬನೆ, ನವೋದಯ, ದೇಶಭಕ್ತಿ, ಮಕ್ಕಳ ಕುರಿತು ಕವನಗಳಿವೆ. ಮಾಯೆ ಮದ್ದಲೆ ಎಂಬ ಕವನವು ಶರಣ ಅಲ್ಲಮಪ್ರಭುವಿನ, ಶರಣೆ ಅಕ್ಕ ಮಹಾದೇವಿ ಕುರಿತ ’ಅಕ್ಕಮಹಾದೇವಿ ಕವನ ಹಾಗೂ ಶರಣರಾದ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ಹೀಗೆ ಶರಣರ ವ್ಯಕ್ತಿತ್ವ ಕುರಿತ ಕವನಗಳು ಇಲ್ಲಿವೆ. ಸುತ್ತಮುತ್ತಲಿನ ವಿದ್ಯಮಾನಗಳ ಹಿನ್ನೆಯಲ್ಲಿಯೂ ಕೆಲ ಕವಿತೆಗಳಿವೆ. ಕವಿ ಜರುಗನಹಳ್ಳಿ ಶಿವಶಂಕರ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಬಹುತೇಕ ಕವಿತೆಗಳು ವಿಷಯ ವೈವಿಧ್ಯತೆಯೊಂದಿಗೆ ಮುದ ನೀಡುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಡಿ.ಎನ್‌. ಅಕ್ಕಿ
(03 October 1948)

ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು.  ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ.  ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...

READ MORE

Related Books