ಉರಿವ ಕರುಳ ದೀಪ

Author : ಬಿದಲೋಟಿ ರಂಗನಾಥ್

Pages 116

₹ 100.00
Year of Publication: 2020
Published by: ನಿವೇದಿತ ಪ್ರಕಾಶನ
Address: ನಂ.3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು- 28
Phone: 9448733323

Synopsys

‘ಉರಿವ ಕರುಳ ದೀಪ’ ಕವಿ ಬಿದಲೋಟಿ ರಂಗನಾಥ್ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ನೂರುಲ್ಲಾ ತ್ಯಾಮಗೊಂಡ್ಲು ಅವರು ಬೆನ್ನುಡಿ ಬರೆದು ‘ಬೆನ್ನಿಗೆ ಬಿದ್ದ ಬರೆಗಳನ್ನು ಮಣ್ಣ ವಾಸನೆಯೊಂದಿಗೆ ಅಭಿವ್ಯಕ್ತಗೊಳಿಸುವ ಕಾವ್ಯ ಲಯ ಬಿದಲೋಟಿ ರಂಗನಾಥ್ ಅವರದು. ಒಡಲ ಹೂವಿನ ಎಸಳಿಗೆ ತಾಕಿದ ಕಂಟಿ ಮುಳ್ಳುಗಳನ್ನು ಮೆಲ್ಲ ಮೆಲ್ಲನೆ ಕಿತ್ತೆಗೆಯುವ ಭಾವ ತೀವ್ರ ಭಾಷೆ ಕವಿಯ ಕವಿತಾ ಸಂವಹನತೆಗೆ ಒದಗಿರುವ ಸೂಕ್ಷ್ಮ ಸಂವೇದನೆ. ತಾನು, ತನ್ನ ಪೂರ್ವಿಕರ ವಿಸ್ಮೃತಿಯೊಂದಿಗೆ ಬದುಕಿನ ತಾತ್ವಿಕತೆಯನ್ನು ಸಮುದಾಯದ ಒಟ್ಟು ಕೇಂದ್ರದಲ್ಲಿ ನಿಲ್ಲಿಸಿ ಸ್ವ ಅಸ್ಮಿತಾತ್ಯದಲ್ಲಿ ಭಾವ ಭಾಷೆಯನ್ನು ದುಡಿಸಿಕೊಳ್ಳುವ ಪ್ರತಿಭೆ ಕವಿ ಇಲ್ಲಿ ಒಳಗು ಮಾಡಿಕೊಂಡಿರುವ ದೇಸಿ ನುಡಿಗಟ್ಟುಗಳಿಂದ ಆವಾಹಿತವಾಗಿವೆ’ ಎನ್ನುತ್ತಾರೆ ಜೊತೆಗೆ, ಕಾವ್ಯದ ಬೀಜ ಸ್ವರೂಪದಂತೆ ನೇಯ್ಗೆಯಾಗಿರುವ ಬಿದಲೋಟಿ ಅವರ ಕವಿತೆಗಳು ಸಮಕಾಲೀನ ಕಾವ್ಯ ಚಹರೆಯ ಪ್ರಜ್ಞೆಯೊಂದಿಗೆ ಆತ್ಮಾವೃತ್ತಿ ಪ್ರಜ್ಞಾವೀಚಿಯನ್ನು ತೆರೆದಿಡುವ ಹೊಸ ತಲೆಮಾರು ಕಾವ್ಯ ಪ್ರಯೋಗದಲ್ಲಿ ಬೆರಗಿನ ವಿಲೋಕನ ಕಾವ್ಯಕರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕವಿತೆಯ ಧ್ಯಾನಾತ್ಮಕ ಶಕ್ತಿ ಇರುವುದರಿಂದಲೇ ಅವರ ಕವಿತೆಗಳು ಹೆಪ್ಪುಗಟ್ಟಿದ ರೂಪಕ ಭಾಷೆಯೊಂದಿಗೆ ಘನೀಭವಿಸಿವೆ. ಉರಿವ ಕರುಳ ದೀಪ ಹೊತ್ತಿಸುವ ಕೆಂಬೆಳಕು ಗತದಿಂದಲೂ ನೆಲಮೂಲದ ಹಟ್ಟಿಗಳ ಗರಿತಟಿಕೆಗಳಲ್ಲಿ ಹುದುಗಿ ಕೊಂಡಿರುವ ಕರಾಳ ಇರುಳನ್ನು ಊರಗಲ ನಾಲಗೆ ಚಾಚಿ: ಕರಗಿಸುವ ಇರಾದೆಯೊಂದಿಗೆ ನೆಲದಿಂದ ನಿಧಾನಕ್ಕೆ ಮೇಲೆ ಆವರಿಸಿ ಅವತರಿಸುತ್ತದೆ. ನೆಲಮೂಲ ಸ್ವರೂಪದ ಸಾಂಸ್ಕೃತಿಕ ಕಾವ್ಯ ಪರಂಪರೆಗೆ ತಮ್ಮದೇ ಶೈಲಿಯ ಮಾರ್ಗವನ್ನು ಕಂಡುಕೊಂಡಿರುವ ಬಿದಲೋಟಿಯವರ ಜೀವಕಾರುಣ್ಯದ ಸೆಲೆ ಭಾವನಾತ್ಮಕವಾದದ್ದು ಮತ್ತು ಸೃಜನಾತ್ಮಕವಾದದ್ದು’ ಎಂದೂ ಪ್ರಶಂಸಿಸಿದ್ದಾರೆ. .

About the Author

ಬಿದಲೋಟಿ ರಂಗನಾಥ್
(15 July 1980)

ಕವಿ ರಂಗನಾಥ ಬಿ ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’ ಅವರ ಎರಡು ಕವನ ಸಂಕಲನಗಳು. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ಹಾಗೂ ಶಾಲೀನಿ ಪುರಸ್ಕಾರ ಲಭಿಸಿವೆ.   ...

READ MORE

Related Books