ಸೂರ್ಯಮುಖಿ

Author : ಎಲ್. ವಿ. ಶಾಂತಕುಮಾರಿ

Pages 265

₹ 180.00




Year of Publication: 2023
Published by: ಅಭಿಜಿತ್ ಪ್ರಕಾಶನ
Address: ಮುಂಬಯಿ

Synopsys

‘ಸೂರ್ಯಮುಖಿ’ ಎಲ್.ವಿ. ಶಾಂತಕುಮಾರಿ ಅವರ ಕವನ ಸಂಕಲನ. ಈ ಕೃತಿಗೆ ಲೇಖಕಿ ಉಮಾ ರಾಮರಾವ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಪ್ರೊಫೆಸರ್ ಎಲ್. ವಿ. ಶಾಂತಕುಮಾರಿಯವರ ಚೊಚ್ಚಲ ಕವನ ಸಂಕಲನವಾದ ಸೂರ್ಯಮುಖಿಯನ್ನು ಕನ್ನಡ ಸಾಹಿತ್ಯ ರಸಿಕರ ಕೈಗೊಪ್ಪಿಸುತ್ತಿರುವ ಈ ಕ್ಷಣವು ನನ್ನಲ್ಲಿ ಸಾರ್ಥಕತೆಯ ಭಾವವನ್ನು ತುಂಬುತ್ತಿದೆ. ಶಾಂತಕುಮಾರಿಯವರು ಗದ್ಯ ಲೇಖಕರಾಗಿ ಸಾಹಿತ್ಯ ವಲಯಗಳಲ್ಲಿ ಈಗಾಗಲೇ ಸುಪರಿಚಿತರಾಗಿದ್ದಾರೆ. ಅವರ ಗದ್ಯ ರಚನೆಯ ಹರಹು ವಿಸ್ತಾರವಾದುದು. ಅದರಲ್ಲಿ ಸಣ್ಣ ಕಥೆ, ವಿಮರ್ಶೆ, ಕೆಲವು ಮಹಕೃತಿಗಳ ಪರಿಚಯಾತ್ಮಕವಾದ ಲೇಖನಗಳೇ ಅಲ್ಲದೆ ಅನುವಾದಿತ ಕೃತಿಗಳೂ ಸೇರಿವೆ. ಆಂಗ್ಲ ಭಾಷೆಯಲ್ಲಿಯೂ ಪ್ರಭುತ್ವವನ್ನು ಹೊಂದಿರುವ ಅವರು ಅನೇಕ ಪುಸ್ತಕಗಳನ್ನು ಕನ್ನಡದಿಂದ ಇಂಗ್ಲೀಷಿಗೂ ಇಂಗ್ಲೀಷಿನಿಂದ ಕನ್ನಡಕ್ಕೂ ಬಹಳ ಸಮರ್ಥವಾಗಿ ತಂದಿದ್ದಾರೆ, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಯುಗಸಾಕ್ಷಿ, ಕಗ್ಗದ ಕಾಣಿಕೆ, ಆದಿಕವಿ ವಾಲ್ಮೀಕಿಯ ಕಥನಶೈಲಿ, ಅನುಭಾ ವಿತ್ರಯರು, ಸಾರ್ವಭೌಮನ ಸ್ವಗತಗಳು ಮೊದಲಾದ ಮೂವತ್ತಕ್ಕೂ ಮೀರಿದ ಕೃತಿಗಳನ್ನು ಅವರು ರಚಿಸಿದ್ದಾರೆ. ಅಧ್ಯಯನ ಬರವಣಿಗೆಗಳಲ್ಲಿ ಸದಾಕಾಲವೂ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಮತಿ ಶಾಂತಕುಮಾರಿಯವರು ಪ್ರಚಾರದಿಂದ ಬಲು ದೂರವಿದ್ದು ಸದ್ದಿಲ್ಲದೆ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ. ಸುಮಾರು ನಲವತ್ತು ವರ್ಷಗಳ ಕಾಲಾವಧಿಯಲ್ಲಿ ಬರೆಯಲ್ಪಟ್ಟಿರುವ ಇಲ್ಲಿನ ಕವನಗಳ ಮುಖ್ಯ ವೈಶಿಷ್ಟ್ಯವೆಂದರೆ ಅವುಗಳಲ್ಲಿರುವ ವಿಷಯ ವೈವಿಧ್ಯ ಅವುಗಳ ತಿರುಳಿಗನುಗುಣವಾಗಿ ಅವನ್ನಿಲ್ಲಿ ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಈ ಕವನಗಳಲ್ಲಿ ಸೊಗಸಿದೆ, ವಿಡಂಬನೆಯಿದೆ, ಅಚ್ಚರಿಯಿದೆ, ಅರ್ಪಣೆಯಿದೆ, ನೋವಿದೆ, ಕೀಟಲೆಯೂ ಇದೆ. ಕವನದ ಭಾವವು ಸಾಧಾರಣವಾದ ಸಾಲುಗಳಲ್ಲಿ ಅರಳುತ್ತಾ ಹೋಗಿ ಕೊನೆಯಲ್ಲೊಂದು ಅಚ್ಚರಿ ಹುಟ್ಟಿಸುವ ಪ್ರತೀಕವಾಗಿ ಬಿಡುವ ಅನನ್ಯತೆಯನ್ನು ಕೆಲವು ಕವನಗಳಲ್ಲಿ ಕಾಣಬಹುದು. ಕವಯತ್ರಿಯ ಮಾಗಿದ ಮನಸ್ಸು, ಉತ್ತಮ ಸಂಸ್ಕಾರ, ಸಮಚಿತ್ತತೆ, ಸ್ಥಿತಪ್ರಜ್ಞೆ ಆರ್ದತೆ, ಆರ್ತತೆಗಳಿಂದ ಈ ಕವನಗಳು ಓದುಗರನ್ನು ತಟ್ಟುತ್ತವೆ; ಇಲ್ಲಿನ ಪ್ರಾಮಾಣಿಕತೆ ಮನಸ್ಸನ್ನು ಮುಟ್ಟುತ್ತದೆ. ಈ ಸಂಕಲನವು ಕನ್ನಡ ಕಾವ್ಯಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ ಎಂದಿದ್ದಾರೆ.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books